ಉಡುಪಿಯಲ್ಲಿ 19 ಪಾಸಿಟಿವ್

corona
Published on

ಉಡುಪಿ: ಜಿಲ್ಲೆಯಲ್ಲಿ ಶನಿವಾರ 19 ಮಂದಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಮಣಿಪಾಲ ಆಸ್ಪತ್ರೆ ವೈದ್ಯರು ಮತ್ತವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಬ್ಬ ವ್ಯಕ್ತಿ, ಉಡುಪಿ ಕರಾವಳಿ ಬೈಪಾಸ್ ಸಮೀಪದ ಹೋಟೆಲ್ ಮಾಲೀಕ, ಕುಂದಾಪುರದ ರಿಕ್ಷಾ ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಇಂದು ದೃಢಪಟ್ಟ 19ರಲ್ಲಿ 15 ಪ್ರಕರಣಗಳು ಸ್ಥಳೀಯ ಸೋಂಕಿತರ ಪ್ರಾಥಮಿಕ ಸಂಪರ್ಕವಾಗಿರುವುದು ಸಮುದಾಯಕ್ಕೆ ಹಬ್ಬುವ ಆತಂಕ ಹೆಚ್ಚುವಂತೆ ಮಾಡಿದೆ. ಕುಂದಾಪುರ 12, ಉಡುಪಿ 7 ಮಂದಿ ಇದರಲ್ಲಿದ್ದು, ಒಬ್ಬ ವ್ಯಕ್ತಿ ಮಹಾರಾಷ್ಟ್ರ, ಮೂವರು ಬೆಂಗಳೂರಿನಿಂದ ಬಂದಿದ್ದಾರೆ. ರ‌್ಯಾಂಡಮ್ ಟೆಸ್ಟ್ ವೇಳೆ ಆಟೋ ಚಾಲಕ, ಹೋಟೆಲ್ ಮಾಲೀಕನಿಗೆ ಸೋಂಕು ಇರುವುದು ದೃಢವಾಗಿದೆ. ಹೋಟೆಲ್ ಸೀಲ್‌ಡೌನ್ ಮಾಡಲಾಗಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

733 ವರದಿ ನೆಗೆಟಿವ್: ಜಿಲ್ಲೆಯಲ್ಲಿ 733 ಮಂದಿಯ ವರದಿ ನೆಗೆಟಿವ್ ಬಂದಿದೆ, 1047 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 1712 ಮಂದಿ ವರದಿ ಬರಲು ಬಾಕಿ ಇದೆ. ಒಟ್ಟು ಸೋಂಕಿತರ ಸಂಖ್ಯೆ 1,277ಕ್ಕೆ ಏರಿದೆ. ಶನಿವಾರ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ 10 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 158 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net