

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 17 ಜನರಿಗೆ ಕರೊನಾ ದೃಢಪಟ್ಟಿದ್ದು, 57 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.
ಈವರೆಗೆ 10,412 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 9,949 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 187 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. 276 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 215 ಸೋಂಕಿತರು ಹೋಂ ಐಸೋಲೇಷನ್ನಲ್ಲಿ ಹಾಗೂ 61 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬ್ಯಾಡಗಿ 1, ಹಾನಗಲ್ಲ 5, ಹಾವೇರಿ 4, ಹಿರೇಕೆರೂರ 2, ರಾಣೆಬೆನ್ನೂರ 4, ಶಿಗ್ಗಾಂವಿ 1 ಒಬ್ಬರಿಗೆ ಸೇರಿ ಒಟ್ಟು 17 ಜನರಿಗೆ ಬುಧವಾರ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ಬುಧವಾರ ಬ್ಯಾಡಗಿ 4, ಹಾನಗಲ್ಲ 4, ಹಾವೇರಿ 4, ಹಿರೇಕೆರೂರು 6, ರಾಣೆಬೆನ್ನೂರು 34, ಸವಣೂರ 3, ಶಿಗ್ಗಾಂವಿ 2 ಜನ ಸೇರಿ 57 ಜನರು ಬಿಡುಗಡೆ ಹೊಂದಿದ್ದಾರೆ.