

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರೊನಾ ಹೊಸ ಪ್ರಕರಣಗಳ ಪ್ರವಾಣ ಏರಿಕೆಯತ್ತ ಸಾಗುತ್ತಿದ್ದರೆ, ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಅಲ್ಪ ಪ್ರವಾಣದಲ್ಲಿದ್ದು ಎರಡರ ನಡುವೆ ಅಜಗಜಾಂತರ ವ್ಯತ್ಯಾಸದಿಂದ ಸಕ್ರಿಯ ಪ್ರಕರಣಗಳು, ಪಾಸಿಟಿವ್ ದರದ ಹೆಚ್ಚಳದ ಒತ್ತಡವು ಆತಂಕಕ್ಕೆ ಕಾರಣವಾಗಿದೆ.
ಮೂರನೇ ಅಲೆಯ ಸಂದರ್ಭದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ ಜಿಲ್ಲೆಯು ತ್ರಿಶತಕ ಬಾರಿಸಿದ್ದು, ಸೋಮವಾರ 2713 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ನಡೆದಿದೆ. ಈ ಪೈಕಿ 2392 ವಾದರಿಗಳು ನೆಗೆಟಿವ್ ಆಗಿದೆ. ಬರೋಬ್ಬರಿ 321 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಶೇ.1 ಲೆಕ್ಕದಲ್ಲಿದ್ದ ಪಾಸಿಟಿವ್ ದರವು ಶೇ.11.83 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 17 ಮಂದಿಗೆ ಸೋಂಕು ಗುಣವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1557 ಕ್ಕೆ ಏರಿಕೆಯಾಗಿದೆ. ಇದೆಲ್ಲದರ ನಡುವೆ ಸಾವು ಪ್ರಕರಣಗಳು ಶೂನ್ಯದಲ್ಲಿದೆ.
ವಹಿವಾಟು ಮಂಕು: ಕರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ವಹಿವಾಟು ಮಂಕಾಗಿದ್ದು ವ್ಯಾಪಾರಸ್ಥರಿಂದ ವ್ಯಾಪಕ ಅಸವಾಧಾನ ವ್ಯಕ್ತವಾಗುತ್ತಿದೆ. ಶನಿವಾರ ಮತ್ತು ಭಾನುವಾರದ ವೀಕೆಂಡ್ ಕರ್ಯ್ೂ ಸಂದರ್ಭದಲ್ಲಿ ತುರ್ತು ಮತ್ತು ಅಗತ್ಯ ಸೇವೆ ಹೊರತುಪಡಿಸಿ, ಉಳಿದಂತೆ ಅಂಗಡಿ, ಹೋಟೆಲ್, ಸಿನಿವಾ ಸೇರಿ ವಾಣಿಜ್ಯ ಕೇಂದ್ರಗಳ ಬಾಗಿಲು ಮುಚ್ಚಿಸಲಾಗುತ್ತಿದೆ. ಇದರ ನಡುವೆ ಉಳಿದ ದಿನಗಳಲ್ಲಿ ಜನರು ಆತಂಕದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಬರುತ್ತಿಲ್ಲ. ಗಂಟೆಗಟ್ಟಲೆ ಗ್ರಾಹಕರಿಗೆ ಎದುರು ನೋಡುವಂತಾಗಿದ್ದು ಹಾಕಿದ ಬಂಡವಾಳ ಸಿಗದೆ ಕೈ ಸುಟ್ಟುಕೊಳ್ಳುವಂತಾಗಿದೆ. ಇದರಿಂದ ಬಹುತೇಕ ಕಡೆ ಸ್ವಯಂ ವ್ಯಾಪಾರಸ್ಥರು ಬೆಳಗ್ಗೆ ಮತ್ತು ಸಂಜೆ ವಹಿವಾಟಿಗೆ ಸೀಮಿತವಾಗಿದ್ದಾರೆ. ರಾಜ್ಯದ ವಾದರಿಯಲ್ಲಿ ಜಿಲ್ಲೆಯಲ್ಲೂ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಹಳ್ಳಿಗಳಲ್ಲೂ, ನಗರ, ಪಟ್ಟಣ ಪ್ರದೇಶದ ಪ್ರತಿ ವಾರ್ಡಿನಲ್ಲೂ ಸೋಂಕಿತರು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿಗಳು ಪತ್ತೆಯಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವುದು ಬಹುತೇಕ ದಟ್ಟವಾಗಿದೆ. ಇನ್ನು ಕಾಯಿಲೆಯ ಯಾವುದೇ ಗುಣ ಲಕ್ಷಣಗಳು ಕಾಣದಿದ್ದರೂ ಸೋಂಕು ದೃಢಪಡುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರ ಜತೆಗೆ ಕರೊನಾ ಆರ್ಥಿಕ ಸಂಕಷ್ಟ, ನಿರ್ಬಂಧಗಳ ಸಮಸ್ಯೆ ಹಿನ್ನೆಲೆಯಲ್ಲಿ ಬಟ್ಟೆ, ಹಾರ್ಡ್‌ವೇರ್, ಪುಸ್ತಕ, ಟೈರು ವಾರಾಟ ಸೇರಿ ಹಲವು ಅಂಗಡಿಗಳಿಗೆ ಗ್ರಾಹಕರ ಕೊರತೆ ಕಾಡುತ್ತಿದೆ.
ಅಲ್ಲಲ್ಲಿ ನಿಯಮ ಉಲ್ಲಂನೆ: ಕರೊನಾ ಆತಂಕದ ನಡುವೆಯೂ ಅಲ್ಲಲ್ಲಿ ನಿರ್ಬಂಧಗಳನ್ನು ರಾಜಾರೋಷವಾಗಿ ಉಲ್ಲಂಸುತ್ತಿರುವುದು ಕಂಡು ಬರುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಸೋಮವಾರ ನಡೆದ ಕುರಿಗಳ ಸಂತೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ, ವಾಸ್ಕ್ ಧರಿಸುವಿಕೆಯನ್ನು ಮರೆತು ರೈತರು ಮತ್ತು ಮಧ್ಯವರ್ತಿಗಳು ಜನಸಂದಣಿಯ ನಡುವೆ ವಹಿವಾಟು ನಡೆಸಿದ್ದಾರೆ. ಹೀಗೆ ಒಂದೆಡೆ ನಿರ್ಬಂಧಗಳ ಉಲ್ಲಂನೆ, ಮತ್ತೊಂದೆಡೆ ವಹಿವಾಟು ಮಂಕು ಕರೊನಾ ನಿಯಂತ್ರಣ ಮತ್ತು ಆರ್ಥಿಕ ಕ್ಷೇತ್ರದ ಚೇತರಿಕೆಯಲ್ಲಿ ಹಿನ್ನಡೆ ಕಂಡು ಬರುತ್ತಿದೆ ಎಂಬ ವಾತು ಕೇಳಿ ಬಂದಿದೆ.
ಮೊದಲಿನಂತೆ ಅಂಗಡಿಯಲ್ಲಿ ವ್ಯಾಪಾರವಾಗುತ್ತಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ಬಾಗಿಲು ತೆಗೆದರೂ ನಿರೀಕ್ಷೆಗೆ ಅನುಗುಣವಾಗಿ ಗ್ರಾಹಕರು ಬರುತ್ತಿಲ್ಲ. ಸಂಪಾದನೆಯೂ ಇಲ್ಲ. ಮಧು, ಫ್ಯಾನ್ಸಿ ಅಂಗಡಿ, ಚಿಕ್ಕಬಳ್ಳಾಪುರ
ತಾಲೂಕು ದೃಢಪಟ್ಟ ಪ್ರಕರಣ ಸೋಂಕುಗುಣ(ಸೋಮವಾರ) ಚಿಕ್ಕಬಳ್ಳಾಪುರ 115 5 ಬಾಗೇಪಲ್ಲಿ 21 0 ಚಿಂತಾಮಣಿ 96 12 ಗೌರಿಬಿದನೂರು 37 0 ಶಿಡ್ಲಘಟ್ಟ 19 0 ಗುಡಿಬಂಡೆ 33 0