ಪಾಸಿಟಿವ್ ಆಗಿದ್ದರೂ ಮುಂಬೈಗೆ ಪರಾರಿ

Corona
Published on

ಪಡುಬಿದ್ರಿ: ಕಾಪು ಪುರಸಭಾ ವ್ಯಾಪ್ತಿಯ ಲೈಟ್‌ಹೌಸ್ ವಾರ್ಡ್‌ನ ಕೋಟ್ಯಾನ್ ಮೂಲಸ್ಥಾನದ ಬಳಿ ಪಡುವಿನಲ್ಲಿ ವಾಸವಿದ್ದ, 4 ಮಂದಿ ಕೋವಿಡ್ ಪಾಸಿಟಿವ್ ರೋಗಿಗಳು ನಿಯಮ ಉಲ್ಲಂಘಿಸಿ ಮುಂಬೈಗೆ ತೆರಳಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಸೋಂಕಿತರು ಮೇ 18ರಿಂದ ಹೋಂ ಐಸೋಲೇಶನ್‌ನಲ್ಲಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಂಬೈಗೆ ಹೋಗಿದ್ದಾರೆ. ರೋಗ ಬೇರೆಯವರಿಗೆ ಹರಡುವುದೆಂದು ತಿಳಿದಿದ್ದರೂ, ನಿರ್ಲಕ್ಷೃದಿಂದ ತೆರಳಿರುವುದರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net