101ಕ್ಕೆ ಏರಿತು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ

Corona 17 March 20
Published on

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ವೈರಸ್‌ ಸೋಂಕಿತರ ಸಂಖ್ಯೆ 101ಕ್ಕೆ ಏರಿದೆ. ಇದುವರೆಗೆ ಮೂವರು ಮರಣಹೊಂದಿದ್ದು, 6 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರಿಗೆ ಪ್ರಯಾಣಿಸಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಮಹಿಳೆಯೊಬ್ಬರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ವಿವರಣೆ ಪಡೆಯಲಾಗುತ್ತಿದೆ.

ಅದೇ ರೀತಿ, ಕರೊನಾ ಸೋಂಕಿತರ ಸಂಪರ್ಕದ ಬಂದ ಬೆಂಗಳೂರು ಮತ್ತು ಮೈಸೂರಿನ ಇಬ್ಬರನ್ನು ಹಾಗೂ ನ್ಯೂಯಾರ್ಕ್‌, ಅಮೆರಿಕ ಪ್ರವಾಸದಿಂದ ಭಾರತಕ್ಕೆ ಇದೇ 22ರಂದು ಬಂದ ಬೆಂಗಳೂರಿನ 19 ವರ್ಷದ ಯುವಕನನ್ನು ಸ್ಥಳೀಯ ‌‌‌ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ದುಬೈನಿಂದ ವಾಪಸಾದ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಯುವಕ ಹಾಗೂ ಭಟ್ಕಳದ ಒಬ್ಬ ಯುವಕನಿಗೂ ಸೋಂಕು ತಗುಲಿರುವ ಶಂಕೆ ಇರುವ ಕಾರಣ, ಅವರನ್ನೂ ಪ್ರತ್ಯೇಕಗೊಳಿಸಿ ವಿವರಣೆ ಪಡೆಯಲಾಗುತ್ತಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ದಾಖಲಾಗುವ ಎಲ್ಲಾ ಪ್ರಕರಣಗಳನ್ನೂ ಕಡ್ಡಾಯವಾಗಿ ಜಿಲ್ಲಾ ಕಣ್ಗಾವಲು ಅಧಿಕಾರಿಗಳಿಗೆ ವರದಿ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net