ದ.ಕ. 456, ಉಡುಪಿ 120 ಪಾಸಿಟಿವ್

Corona virus photo
Published on

ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 11 ಸಾವು ಸೇರಿದಂತೆ 456 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಲ್ಲಿ ಮಂಗಳೂರಿನ 242, ಬಂಟ್ವಾಳದ 86, ಪುತ್ತೂರಿನ 27, ಸುಳ್ಯದ 26, ಬೆಳ್ತಂಗಡಿಯ 40, ಇತರ ಜಿಲ್ಲೆಯ 35 ಪ್ರಕರಣ ಸೇರಿದೆ. ಒಟ್ಟು 264 ಲಕ್ಷಣ ಸಹಿತ ಹಾಗೂ 192 ಲಕ್ಷಣ ರಹಿತ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 20 ಸಾವಿರ ಸಮೀಪಿಸುತ್ತಿದ್ದು, ಗುರುವಾರ 19,322ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4506ಕ್ಕೆ ತಲುಪಿದೆ. ಗುರುವಾರ 340 ಮಂದಿ ಸೋಂಕುಮುಕ್ತರಾಗಿದ್ದು ಸೋಂಕು ನಿವಾರಣೆಯಾದವರ ಒಟ್ಟು ಸಂಖ್ಯೆ 14344ಕ್ಕೆ ಮುಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 120 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 14,398ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ 1,358 ಸಕ್ರಿಯ ಕರೊನಾ ಸೋಂಕಿತರಿದ್ದಾರೆ ಎಂದು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಸೆ.14ರಿಂದ 18ರವರೆಗೆ ಜಿಲ್ಲೆಯಲ್ಲಿ ಒಂಭತ್ತು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ 145 ಮಂದಿ ಸಹಿತ ಕೇರಳದಲ್ಲಿ ಶುಕ್ರವಾರ 4,167 ಮಂದಿಗೆ ಕೋವಿಡ್-19 ಬಾಧಿಸಿದೆ. ರಾಜ್ಯದಲ್ಲಿ ಶುಕ್ರವಾರ 12 ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯ 110 ಮಂದಿ ಸೇರಿ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 2,744 ಮಂದಿ ಗುಣಮುಖರಾಗಿದ್ದಾರೆ.

ಶಾಸಕ ಕೋಟ್ಯಾನ್‌ಗೆ ಕೋವಿಡ್

ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧಿವೇಶನಕ್ಕೆ ತೆರಳುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಗುರುವಾರ ಬಂದ ವರದಿಯಲ್ಲಿ ಕರೊನಾ ದೃಢಪಟ್ಟಿದೆ. ಕೋಟ್ಯಾನ್ ಹಾಗೂ ಅವರ ವಾಹನ ಚಾಲಕ ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net