ಕರೊನಾ ಯೋಧರ ಸೇವೆ ರಾಷ್ಟ್ರ ಸೇವೆಗೆ ಸಮ

VMS 28-3
Published on

ವಿಜಯಪುರ: ಜಗತ್ತನ್ನೇ ತಲ್ಲಣಗೊಳಿಸಿದ ಕೊವೀಡ್-19 ರೋಗ ತಡೆಯುವಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ನೌಕರರ ಸೇವೆ ರಾಷ್ಟ್ರ ಸೇವೆಗೆ ಸಮ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಡಾ. ಸತೀಶ ಜಿಗಜಿನಿ ಹೇಳಿದರು.
ನಗರದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರೊನಾ ಯೋಧರನ್ನು ಕಂಡು ಅವರ ಕ್ಷೇಮ ಸಮಾಚಾರ ವಿಚಾರಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಅಭಿನಂದಿಸಿ ಅವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಕುಂಬಾರ ಹಾಗೂ ರಾಜಶೇಖರ ಖೇಡಗಿ ಇದ್ದರು. ಮಂಗಳವಾರ ಅಭಿನಂದನಾ ಆಂದೋಲನದಲ್ಲಿ ಪೊಲೀಸ್, ಆರೋಗ್ಯ ಹಾಗೂ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net