ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಿ

web 1
Published on

ಎನ್.ಆರ್.ಪುರ: ಕರೊನಾ ಸಂಕಷ್ಟದ ನಡುವೆಯೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜಯಪಾಲ್ ಒತ್ತಾಯಿಸಿದರು.

ಬ್ಯಾಂಕ್ ಆವರಣದಲ್ಲಿ ಸೋಮವಾರ 5 ಜನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು.

ತಾಲೂಕಿನಲ್ಲಿ 69 ಆಶಾ ಕಾರ್ಯಕರ್ತೆಯರಿದ್ದು, ಇವರಲ್ಲಿ 5 ಜನರಿಗೆ ನಮ್ಮ ಬ್ಯಾಂಕ್​ನಿಂದ ತಲಾ 3 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಪ್ರೋತ್ಸಾಹಧನ ಸ್ವೀಕರಿಸಿದ ಆಶಾ ಕಾರ್ಯಕರ್ತೆಗೀತಾ ಮಾತನಾಡಿ, ಲಾಕ್​ಡೌನ್ ಘೊಷಣೆಯಾದ ನಂತರ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಗ್ರಾಮದ ಜನರ ಆರೋಗ್ಯ ಕಾಪಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಹಣ ಸಂಪಾದನೆಗೆ ವಿದೇಶ ಹಾಗೂ ಬೇರೆ ರಾಜ್ಯಕ್ಕೆ ಹೋದವರು ಹಣಕ್ಕಿಂತ ಆರೋಗ್ಯ ಮುಖ್ಯ ಎಂದು ಮತ್ತೆ ಊರಿಗೆ ವಾಪಾಸಾಗುತ್ತಿದ್ದಾರೆ. ವಲಸೆ ಬಂದವರಿಂದ ಕರೊನಾ ಸೋಂಕು ಹೆಚ್ಚಾಗುತ್ತಿದೆ. ಸಹಕಾರ ಸಂಘಗಳು ನಮ್ಮ ಸೇವೆ ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಆಶಾ ಕಾರ್ಯಕರ್ತೆಯರಾದ ಗೀತಾ, ಪೂರ್ಣಿಮಾ, ಅನಿತಾ, ಶೈನಿ, ನೇತ್ರಾ ಅವರಿಗೆ ಪ್ರೋತ್ಸಾಹಧನ ನೀಡಲಾಯಿತು.

ಆಡಳಿತ ಮಂಡಳಿ ಉಪಾಧ್ಯಕ್ಷ ವೈ.ಎಸ್.ರವಿ, ನಿರ್ದೇಶಕರಾದ ಡಿ.ಎನ್.ಅಶ್ವನ್, ಎ.ಎಲ್.ಮಹೇಶ್, ಸನ್ನಿ, ಸಿಇಒ ಪ್ರದ್ಯುಮ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net