

ಬೆಂಗಳೂರು: ವಾಟ್ಸ್ಆ್ಯಪ್ ಸಂದೇಶದಲ್ಲಿ ಕರೊನಾ ಸೋಂಕಿಗೆ ರೆಮ್ಡೆಸಿವಿರ್ ಮತ್ತು ಔಷಧ ಕೊಡುವುದಾಗಿ ನಂಬಿಸಿ ಜನರಿಗೆ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಕೇಂದ್ರ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದಲ್ಲಿ ನೆಲೆಸಿದ್ದ ನೈಜೀರಿಯಾ ದೇಶದ ಅಳದೆ ಅಬ್ದುಲ್ಲಾ ಯೂಸು್ (26) ಮತ್ತು ವಿದ್ಯಾರಣ್ಯಪುರದ ಮಹಮ್ಮದ್ ಇಸ್ಮಾಯಿಲ್ ಖಾದ್ರಿ (43) ಬಂಧಿತರು. ಬೀದರ್ ಮತ್ತು ಬೆಂಗಳೂರು ನಗರದಲ್ಲಿ ದಾಖಲಾಗಿದ್ದ 4 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಮೊಬೈಲ್ ಸಿಮ್ ಕಾರ್ಡ್ ಮಾರಾಟಗಾರ ಮಹಮ್ಮದ್, ಬಳಿಗೆ ಸಿಮ್ ಖರೀದಿಗೆ ಅಬ್ದುಲ್ಲಾ ಬಂದಾಗ ಸ್ನೇಹ ಬೆಳೆದಿರುತ್ತದೆ. ಕರೊನಾ ಕ್ಯೂರ್, ಸೋಂಕು ಆವರಿಸಿದಾಗ ನೈಜೀರಿಯಾ ಪ್ರಜೆ ಆನ್ಲೈನ್ ವಂಚನೆಗೆ ಸ್ಕೆಚ್ ಹಾಕಿದ್ದ. ಸಿಮ್ ಕಾರ್ಡ್ ಮತ್ತು 1 ಬ್ಯಾಂಕ್ ಖಾತೆಗೆ 10 ಸಾವಿರ ರೂ. ಪಡೆದು ಸ್ನೇಹಿತ ಮಹಮ್ಮದ್ ಬಳಿ ನೈಜೀರಿಯಾ ಪ್ರಜೆ ಪಡೆದಿದ್ದ.
ಕರೊನಾ ಚಿಕಿತ್ಸೆಗೆ ಬಳಸುತ್ತಿರುವ ರೆಮ್ಡೆಸಿವಿರ್ ಮತ್ತು ಇನ್ನಿತ್ತರ ಔಷಧಗಳನ್ನು ಆನ್ಲೈನ್ನಲ್ಲಿ ಸರಬರಾಜು ಮಾಡುವುದಾಗಿ ವಾಟ್ಸ್ಆ್ಯಪ್ನಲ್ಲಿ ಸಂದೇಶಗಳನ್ನು ವೈರಲ್ ಮಾಡಿದ್ದ. ಸಂಕಷ್ಟದಲ್ಲಿ ಇರುವ ಜನರು ಪೋಸ್ಟರ್ ನೋಡಿ ಅದರಲ್ಲಿನ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಆರ್ಡರ್ ಪಡೆಯುತ್ತಿದ್ದ. ಆನಂತರ ಮುಂಗಡ ಹಣ ಪಾವತಿ ಮಾಡಬೇಕೆಂದು ಆನ್ಲೈನ್ನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ.
ವಿಲ್ಸನ್ ಗಾರ್ಡನ್ನ ರಾಜ್ ಅಗರವಾಲ್ ಎಂಬಾತ ಆನ್ಲೈನ್ನಲ್ಲಿ ಸರ್ಚ್ ಮಾಡಿ ಕರೊನಾ ಔಷಧ ಬುಕ್ ಮಾಡಿದ್ದರು. ಆಗ ಆರೋಪಿಗಳು 36 ಸಾವಿರ ರೂ. ಪಡೆದು ವಂಚನೆ ಮಾಡಿದ್ದರು.
ವಿಲ್ಸನ್ ಗಾರ್ಡನ್ನ ಮುಜಾಹಿದ್ ಅಹ್ಮದ್ ಎಂಬುವರಿಗೆ ಆಸ್ಪತ್ರೆಗೆ ಔಷಧ ಕಳುಹಿಸುವುದಾಗಿ ಹೇಳಿ 85 ಸಾವಿರ ರೂ. ಪಡೆದು ನೈಜೀರಿಯಾ ಪ್ರಜೆ ಮೋಸ ಮಾಡಿದ್ದ.
ಬೀದರ್ನ ಡಾ.ಚಂದ್ರಪ್ರಕಾಶ್, ವಾಟ್ಸ್ಆ್ಯಪ್ ಸಂದೇಶದಲ್ಲಿದ್ದ ಎಚ್ಎಲ್ಎಲ್ ಲೈ್ಕೇರ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಇನ್ಜಕ್ಷನ್ ಬುಕ್ ಮಾಡಿದ್ದರು. ಅವರಿಂದ 85 ಸಾವಿರ ರೂ. ಪಡೆದು ಮೋಸ ಮಾಡಿದ್ದರು. ಇದೇ ರೀತಿ ಮಾರತ್ಹಳ್ಳಿಯ ಕೃಷನ್ ಕುಮಾರ್ ಎಂಬಾತನ ಬಳಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
110 ಸಿಮ್ ಕಾರ್ಡ್ ಜಪ್ತಿ : ಬಂಧಿತರಿಂದ 4 ಮೊಬೈಲ್, 1 ಹಾರ್ಡ್ಡಿಸ್ಕ್, 110 ವಿವಿಧ ಕಂಪನಿಯ ಸಿಮ್ ಕಾರ್ಡ್, 10 ಬ್ಯಾಂಕ್ ಖಾತೆಗಳಲ್ಲಿ 4 ಲಕ್ಷ ರೂ.ಜಪ್ತಿ ಮಾಡಲಾಗಿದೆ. ಇದೇ ರೀತಿ ಆರೋಪಿಗಳು ವಂಚನೆ ಮಾಡಿರುವ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.