ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಹಬೊಹಳ್ಳಿ ಜನಜಾಗೃತಿ ಸೇವಾ ಸಂಘ ಒತ್ತಾಯ

HB Halli Wanderer Association Appeal
ಹಗರಿಬೊಮ್ಮನಹಳ್ಳಿಯಲ್ಲಿ ಉಪತಹಸೀಲ್ದಾರ್ ಅನ್ನದಾನೇಶ್ವರಗೆ ತಾಲೂಕು ಅಲೆಮಾರಿ ಜನಜಾಗೃತಿ ಸೇವಾ ಸಂಘ ಶುಕ್ರವಾರ ಮನವಿ ಸಲ್ಲಿಸಿತು.
Published on

ಹಗರಿಬೊಮ್ಮನಹಳ್ಳಿ: ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಅಲೆಮಾರಿ, ಅರೆ ಅಲೆಮಾರಿ, ನಿರಾಶ್ರಿತ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ತಾಲೂಕು ಅಲೆಮಾರಿ ಜನಜಾಗೃತಿ ಸೇವಾ ಸಂಘ ಶುಕ್ರವಾರ ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಮಂಜುನಾಥ ಮಾತನಾಡಿ, ಕರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿರುವ ಸುಡುಗಾಡು ಸಿದ್ಧರು, ಬುಡ್ಗ ಜಂಗಮರು, ಚನ್ನದಾಸ, ಹಂಡಿ, ಜೋಗಿ ಇತರೆ ನಿರಾಶ್ರಿತ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ತಾಲೂಕಿನ ಆನೇಕಲ್ಲು, ಹಂಪಾಪಟ್ಟಣ, ಎಚ್.ಓಬಳಾಪುರ, ಹೊಸ್ಕೇರಿ, ನಂದಿಪುರ ಸೇರಿ ಪಟ್ಟಣ ವ್ಯಾಪ್ತಿಯ ರಾಮ್‌ರಹೀಂ ನಗರ, ಸೋಮೇಶ್ವರ ನಗರದಲ್ಲಿ ಒಟ್ಟು 350 ಕುಟುಂಬಗಳು ವಾಸವಾಗಿವೆ. ಬದುಕಲು ನಿಶ್ಚಿತ ಭೂಮಿ ಇಲ್ಲದೆ, ಆದಾಯವಿಲ್ಲದೆ ಕೆಲವರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕಲಾ ಪ್ರದರ್ಶನ, ಭಿಕ್ಷಾಟನೆ, ಕಾಯಕಯೋಗಿಗಳು, ಸಣ್ಣಪುಟ್ಟ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಆದ್ದರಿಂದ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net