ಕರೊನಾ ಹರಡೋಣ ಬನ್ನಿ ಎಂದವ ಸಿಸಿಬಿಗೆ ಸಿಕ್ಕಿಬಿದ್ದ

corona spred 28 mar 20
Published on

ಬೆಂಗಳೂರು: ಸಾರ್ವಜನಿಕ ಪ್ರದೇಶದಲ್ಲಿ ಓಡಾಡಿ ಸೀನುವ ಮೂಲಕ ಕರೊನಾ ವೈರಸ್ ಹರಡಲು ಕೈ ಜೋಡಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಟೆಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರು ನಿವಾಸಿ ಮುಜೀಬ್ (25) ಬಂಧಿತ. ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ, ಮುಜೀಬ್ ಮೊಹಮದ್ ಹೆಸರಿನ ಲಿಂಕ್ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ಸೀನುವುದರ ಮೂಲಕ ಕರೊನಾ ವೈರಸ್ ಹರಡೋಣ ಎಂದು ಬರೆದು ಪೋಸ್ಟ್ ಮಾಡಿದ್ದ. ಈತನ ಪೋಸ್ಟ್ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಲಿಂಕ್ಡಿನ್​ನಲ್ಲಿ ಮುಜೀಬ್ ಹೆಸರಿನ ಖಾತೆ ಡಿಲಿಟ್ ಆಗಿದೆ. ಆರೋಪಿ ಮೊಬೈಲ್, ಲ್ಯಾಪ್​ಟಾಪ್​ನಲ್ಲಿರುವ ಮಾಹಿತಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದ್ದು, ಈತ ಡಿಲಿಟ್ ಮಾಡಿರುವ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತಂದೆ ಭಾರತೀಯ ವಾಯುಸೇನೆಯ ನಿವೃತ್ತ ಸಿಬ್ಬಂದಿ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net