ಆರೋಗ್ಯ ರಕ್ಷಣೆ ಅವರವರ ಜವಾಬ್ದಾರಿ: ನ್ಯಾಯಾಧೀಶೆ ರೂಪಶ್ರೀ

jatha new
Published on

ಕಾರ್ಕಳ: ಕರೊನಾ ನಿಯಂತ್ರಣ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗುವವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರೋಗ್ಯಯುತ ಸಮಾಜದಿಂದ ಸದೃಢ ಭಾರತ ನಿರ್ಮಾಣ ಸಾಧ್ಯ. ಸಾರ್ವಜನಿಕರೊಂದಿಗೆ ಇರುವಾಗ ಮುಖ ಕವಚವನ್ನು ಧರಿಸುವುದು ಅತ್ಯವಶ್ಯ ಎಂದು ಕಾರ್ಕಳ ಸೀನಿಯರ್ ಸಿವಿಲ್ ಜಡ್ಜ್ ರೂಪಶ್ರೀ ಹೇಳಿದರು.

ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಪ್ರಾಧಿಕಾರ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ, ಕಾರ್ಕಳ ತಾಲೂಕು ಆಡಳಿತ ಇಲಾಖೆ, ಕಾರ್ಕಳ ಆರೋಗ್ಯ ಇಲಾಖೆ, ಕಾರ್ಕಳ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಕುರಿತು ಜನ ಆಂದೋಲನದ ಬಗ್ಗೆ ಜಾಥಕ್ಕೆ ಇತ್ತೀಚೆಗೆ ಚಾಲನೆ ನೀಡಿ ಪ್ರತಿಜ್ಞಾ ವಿಧಿ ನೆರವೇರಿಸಿ ಮಾತನಾಡಿದರು.

ಜಾಥವು ಕಾರ್ಕಳ ವಿಸ್ತೃತ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ಮೂರು ಮಾರ್ಗವಾಗಿ ಮೂಲಕ ಸಾಗಿ ಬಂದು ಸಂಪನ್ನಗೊಂಡಿತು.

ಕಾರ್ಕಳ ಪ್ರಧಾನ ಸಿವಿಲ್ ಜಡ್ಜ್ ಪುಟ್ಟರಾಜು, ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಸತೀಶ್ ಬಿ. ಜಾಥಾ ನೇತೃತ್ವ ವಹಿಸಿದ್ದರು.

ಕಾರ್ಕಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸನತ್‌ಕುಮಾರ್ ಜೈನ್, ಜತೆ ಕಾರ್ಯದರ್ಶಿ ಮುಕ್ತಾ ಶೆಣೈ, ಕಾರ್ಯದರ್ಶಿ ಪ್ರಸಾದ್ ಜೈನ್, ಕೋಶಾಧಿಕಾರಿ ಅರುಣ್‌ಕುಮಾರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಖರ್ ಮಡಿವಾಳ, ನವೀನ್‌ಚಂದ್ರ ಹೆಗ್ಡೆ, ಪಿ.ಎ.ಸಮ್ಮದ್, ರೇಖಾ ಹೆಗ್ಡೆ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್, ನಗರ ಠಾಣಾಧಿಕಾರಿ ಮಧು, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಪದ್ಮಾವತಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net