

ನಿಪ್ಪಾಣಿ: ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಮಾರಕ ಕರೊನಾ ಸೋಂಕಿಗೆ ಮದ್ದು ಕಂಡುಹಿಡಿದಿಲ್ಲ. ನಾವು ನಮ್ಮ ರಕ್ಷಣೆ ಮಾಡಿಕೊಳ್ಳಬೇಕಾಗಿದ್ದರಿಂದ ಮಾಸ್ಕ್ ಧರಿಸುವುದು ಬಹಳ ಮಹತ್ವದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ತಾಲೂಕಾಡಳಿತ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವೈದ್ಯಕೀಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆ ಆಶ್ರಯದಲ್ಲಿ ಸ್ಥಳೀಯ ನಗರಸಭೆ ಬಳಿ ಗುರುವಾರ ಮಾಸ್ಕ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಗಾಲ್ವನ್ ಕಣಿವೆಯಲ್ಲಿನ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ನಂತರ ನಗರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಸಿಪಿಐ ಸಂತೋಷ ಸತ್ಯನಾಯಿಕ, ಬಿಇಒ ರೇವತಿ ಮಠದ, ಸಿಡಿಪಿಒ ಸುಮಿತ್ರಾ ಡಿ.ಬಿ., ವೈದ್ಯಾಧಿಕಾರಿ ಡಾ.ಸೀಮಾ ಗುಂಜಾಳ, ಪ್ರವೀಣ ಶಹಾ, ಪ್ರಣವ ಮಾನವಿ ಮತ್ತಿತರರು ಇದ್ದರು.