

ಉಗರಗೋಳ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರೂ ಮನೆಯಲ್ಲೇ ಇರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಗುರುನಾಥ ಗಂಗಲ ಹೇಳಿದರು.
ಸಮೀಪದ ಹಂಚಿನಾಳ ಗ್ರಾಮದಲ್ಲಿ ಕರೊನಾ ಸೋಂಕು ನಿಯಂತ್ರಣ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕು. ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸಬಾರದು. ಸರ್ಕಾರ ನೀಡುವ ಆದೇಶ ಪಾಲಿಸಬೇಕು ಎಂದರು. ಬಾಳು ಮುಶೆನ್ನವರ, ಜಯಶ್ರೀ ಹಿರೇಮಠ, ಮುಮ್ತಾಜ್ ಮುಲ್ಲಾ, ವಿಠ್ಠಲ ಚೌಡಾರಿ, ಇಮಾಮಸಾಬ್ ಬಾಗೂರ, ವಿಜಯ ಅಂಗಡಿ ಇತರರು ಇದ್ದರು.