ನೆರಿಗಾದಲ್ಲಿ ಉಲ್ಬಣಗೊಂಡ ಕರೊನಾ ಸೋಂಕು, ಪ್ರತಿ 40-50 ಮಂದಿಯಲ್ಲಿ ಸೋಂಕು ಪತ್ತೆ, ಪರೀಕ್ಷೆ ಒಳಪಡಲು ಗ್ರಾಮಸ್ಥರ ಹಿಂದೇಟು

27 anekal corona
Published on

ಆನೇಕಲ್: ನೆರಿಗಾ ಗ್ರಾಮದಲ್ಲಿ ಮೂರು ದಿನಗಳಿಂದ ಐವತ್ತು ಮಂದಿಗೆ ಕರೊನಾ ದೃಢಪಡುತ್ತಿರುವುದು ಗ್ರಾಮಸ್ಥರಲ್ಲಿ ಭೀತಿಗೆ ಕಾರಣವಾಗಿದೆ.

ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡುತ್ತಿದ್ದರೂ ಗ್ರಾಮಸ್ಥರು ಸಹಕರಿಸುತ್ತಿಲ್ಲ. ಕೊನೆಗೆ ಪೊಲೀಸರು ಗ್ರಾಮಸ್ಥರು ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ಪಡಿತರ ನೀಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪರೀಕ್ಷೆಗೆ ಒಳಪಡದಿದ್ದರೆ ಮುಂದೆ ಆತಂಕ ಎದುರಾಗಲಿದೆ. ಹೀಗಾಗಿ ಎಲ್ಲರೂ ಪರೀಕ್ಷೆಗೆ ಒಳಗಾಗಬೇಕು ಎಂದು ಆಟೋದಲ್ಲಿ ಅರಿವು ಮಾಡಲಾಗುತ್ತಿದೆ. ಹೀಗಿದ್ದರೂ ಗ್ರಾಮಸ್ಥರು ಪರೀಕ್ಷೆ ಒಳಗಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ತಲೆನೋವು ಎದುರಾಗಿದೆ.

ನೆರಿಗಾ ಗ್ರಾಮದ ಪ್ರತಿ ಮನೆಗೆ ತೆರಳಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ 150 ಮಂದಿಗೆ ಚಿಕಿತ್ಸೆ ಕೂಡ ನೀಡಲಾಗಿದೆ. ಡಾ.ವಿನಯ್ ತಾಲೂಕು ಆರೋಗ್ಯ ಅಧಿಕಾರಿ ಗ್ರಾಮದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಸೋಂಕು ಅಧಿಕವಾಗಿ ಹರಡಿದೆ. ಗ್ರಾಮಸ್ಥರು ಪರೀಕ್ಷೆಗೆ ಒಳಪಡಿಸಿಕೊಂಡು ಸೋಂಕು ದೃಢಪಟ್ಟರೆ ಚಿಕಿತ್ಸೆಗೆ ಒಳಗಾಗಬೇಕು. ಹೋಗೇಶ್‌ರೆಡ್ಡಿ, ಬಿಜೆಪಿ ಮುಖಂಡ ಗ್ರಾಮದಲ್ಲಿ ವೈರಸ್ ಸೋಂಕು ತೀವ್ರವಾಗಿರುವುದರಿಂದ ಎಲ್ಲರೂ ಪರೀಕ್ಷೆಗೆ ಒಳಪಟ್ಟು ಸೋಂಕು ಇದ್ದರೆ ಚಿಕಿತ್ಸೆ ಪಡೆಯಬೇಕು. ಸಂತೋಷ್, ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net