ಪ್ರವಾಸೋದ್ಯಮಕ್ಕೆ ತಟ್ಟಿದ ಕೊರೊನಾ ಬಿಸಿ

Coronaviris 24 Jan 20
Published on

ಬೆಂಗಳೂರು: ಚೀನಾದಲ್ಲಿ ನೋವೆಲ್ ಕರೊನಾ ವೈರಸ್ ವ್ಯಾಪಕವಾಗಿ ಹರಡಿರುವುದರಿಂದ ಪ್ರವಾಸೋದ್ಯಮ ಹಾಗೂ ಧಾರ್ವಿುಕ ಯಾತ್ರೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

ಕರ್ನಾಟಕ ಸೇರಿ ದೇಶದ ನಾನಾ ಭಾಗಗಳಿಂದ ಪ್ರತಿ ವರ್ಷ (ಮೇನಿಂದ ಸೆಪ್ಟೆಂಬರ್​ವರೆಗೆ) ಸಹಸ್ರಾರು ಜನ ಮಾನಸ ಸರೋವರ ಯಾತ್ರೆಗೆ ತೆರಳುತ್ತಾರೆ. ಇದಕ್ಕಾಗಿ 5-6 ತಿಂಗಳು ಮೊದಲು ಟಿಕೆಟ್ ಬುಕ್ ಮಾಡಿಸುತ್ತಿದ್ದರು. ಆದರೆ, ಕರೊನಾ ವೈರಸ್ ಭೀತಿಯಿಂದ ಯಾತ್ರೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಬುಕಿಂಗ್ ರದ್ದುಗೊಳಿಸುತ್ತಿದ್ದಾರೆ.

ನಮ್ಮ ಟ್ರಾವೆಲ್ಸ್​ನಿಂದ ಪ್ರತಿವರ್ಷ 50ಕ್ಕೂ ಹೆಚ್ಚು ಜನ ಯಾತ್ರೆಗೆ ಹೋಗುತ್ತಿದ್ದರು. 20ಕ್ಕೂ ಹೆಚ್ಚು ಮಂದಿ ಟಿಕೆಟ್ ಬುಕ್ ಮಾಡಿಸಿದ್ದರು. ಆದರೆ, ಸೋಂಕಿನ ಭೀತಿಯಿಂದ ಬುಕಿಂಗ್ ರದ್ದುಗೊಳಿಸಿದ್ದಾರೆ ಎಂದು ನಗರದ ಏಷ್ಯನ್ ಟೂರ್ಸ್ ಆಂಡ್ ಟ್ರಾವೆಲ್ಸ್​ನ ರಾಮಕೃಷ್ಣ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೂ ತಟ್ಟಿದ ಬಿಸಿ: ಕರೊನಾ ವೈರಸ್ ಮಾನಸ ಸರೋವರ ಯಾತ್ರೆಯ ಮೇಲಷ್ಟೇ ಅಲ್ಲ, ಪ್ರವಾಸೋದ್ಯಮಕ್ಕೂ ಬಿಸಿ ಮುಟ್ಟಿಸಿದೆ. ಚೀನಾ ಅಲ್ಲದೆ, ಜಪಾನ್, ಥಾಯ್ಲೆಂಡ್, ಸಿಂಗಾಪುರ, ಹಾಂಕಾಂಗ್,

ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜರ್ಮನಿ, ಮಕಾವೊ ಸೇರಿ 27 ದೇಶಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಈ ರಾಷ್ಟ್ರಗಳ ಪ್ರವಾಸಿಗರ ಸಂಖ್ಯೆ ಶೇ.70 ಕುಸಿದಿದೆ. ಚೀನಾದಲ್ಲೇ ಸೋಂಕು ಹರಡುತ್ತಿರುವುದರಿಂದ, ಅಲ್ಲಿಗೆ ತೆರಳುವವರ ಸಂಖ್ಯೆ ಶೇ.98 ಕುಸಿದಿದೆ.

ಪ್ರಯಾಣ ವಿಮೆ ರದ್ದು

ಸಾಮಾನ್ಯವಾಗಿ ವಿದೇಶಗಳಿಗೆ ತೆರಳುವವರಿಗೆ ಪ್ರಯಾಣ ವಿಮೆ ಮಾಡಿಸಲಾಗುತ್ತದೆ. ಪ್ರವಾಸದ ಪ್ಯಾಕೇಜ್​ನಲ್ಲೇ ಇದು ಸೇರಿರುತ್ತದೆ. ಆದರೆ ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಚೀನಾಗೆ ತೆರಳುವವರಿಗೆ ಪ್ರಯಾಣ ವಿಮೆ ಕೊಡಲು ವಿಮಾ ಕಂಪನಿಗಳು ನಿರಾಕರಿಸುತ್ತಿವೆ ಎಂದು ಕೆಲ ಟೂರ್ಸ್ ಆಂಡ್ ಟ್ರಾವೆಲ್ಸ್ ಏಜೆನ್ಸಿಗಳ ಮುಖ್ಯಸ್ಥರು ತಿಳಿಸಿದ್ದಾರೆ.

ನಮ್ಮ ಟ್ರಾವೆಲ್ಸ್​ನಿಂದ ಪ್ರತಿ ವರ್ಷ ನೂರಾರು ಮಂದಿ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದರು. ಚೀನಾದಲ್ಲಿ ಏಪ್ರಿಲ್-ಮೇನಲ್ಲಿ ನಡೆವ ಟ್ರೇಡ್​ಫೇರ್​ಗಳಲ್ಲಿ ಭಾಗವಹಿಸಲು 600ರಿಂದ ಸಾವಿರ ಜನರು ತೆರಳುತ್ತಿದ್ದರು. ಕರೊನಾ ವೈರಸ್ ಸೋಂಕು ತೀವ್ರವಾಗಿರುವ ಕಾರಣ, ಈಗಾಗಲೇ 200ಕ್ಕೂ ಹೆಚ್ಚು ಮಂದಿ ಟಿಕಿಟ್ ಬುಕಿಂಗ್ ರದ್ದು ಪಡಿಸಿ ಹಣ ವಾಪಸ್ ಪಡೆದಿದ್ದಾರೆ. | ಸುಬಹ್ಮಣ್ಯ ಟಿಬ್ರೋ ಟೂರ್ಸ್ ಪ್ರೖೆ.ಲಿ. ಸಹ ಉಪಾಧ್ಯಕ್ಷ

ಕೆ. ಎಂ. ಪಂಕಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net