ಜಿಲ್ಲೆ ಹಸಿರು ವಲಯವಾಗುವ ನಿರೀಕ್ಷೆ, ಶಾಸಕ ಎಸ್.ಭೀಮಾನಾಯ್ಕ ವಿಶ್ವಾಸ

280420 Kotturu Bheemanayak Food Kit Isue
Published on

ಕೊಟ್ಟೂರು: ಜಿಲ್ಲೆಯಲ್ಲಿ 13 ಕರೊನಾ ಸೋಂಕಿತರ ಪೈಕಿ ಐವರು ರೋಗ ಮುಕ್ತರಾಗಿದ್ದು, ಸರ್ಕಾರ ಕಿತ್ತಳೆ ವಲಯ ಎಂದು ಘೋಷಿಸಿದೆ. ಮುಂದೆ ಉಳಿದ ಎಲ್ಲರೂ ಸೋಂಕು ಮುಕ್ತರಾಗಿ ಜಿಲ್ಲೆ ಹಸಿರು ವಲಯವಾಗುವ ವಿಶ್ವಾಸವಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಬಡವರಿಗೆ 1120 ಆಹಾರ ಕಿಟ್ ವಿತರಿಸಿ ಮಾತನಾಡಿದರ. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಸೇರಿ ಒಟ್ಟು ಐದು ಸಾವಿರ ಫುಡ್ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು. ಜನರ ಸುರಕ್ಷಿತೆ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮತ್ತು ಮರಿಯಮ್ಮಹಳ್ಳಿಯಲ್ಲಿ ಸ್ವಂತ ಖರ್ಚಿನಿಂದ ಸೋಂಕು ನಿವಾರಣೆಗೆ ಸುರಂಗ ಮಾರ್ಗ ನಿರ್ಮಿಸಿದ್ದೆ. ಆದರೆ, ಜಿಲ್ಲಾಧಿಕಾರಿ ತೆರವುಗೊಳಿಸಿದ್ದಾರೆ. ಈ ಕುರಿತು ಜಿಲ್ಲಾ ವೈದ್ಯಾಧಿಕಾರಿಗೆ ಪತ್ರ ಬರೆದರೂ ಉತ್ತರ ಬಂದಿಲ್ಲ. ತಾರತಮ್ಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆಯುವುದಾಗಿ ತಿಳಿಸಿದರು. ಜಿಪಂ ಸದಸ್ಯ ಹರ್ಷವರ್ಧನ್, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಟಿ.ರಾಮಣ್ಣ, ಮುಖಂಡರಾದ ವಿರೂಪಾಕ್ಷಪ್ಪ, ಪಕ್ಕೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net