ಗೋ ಶಾಲೆಗಳಿಗೆ 900 ಕೋಟಿ ರೂ.

web 1
Published on

ಬಾಳೆಹೊನ್ನೂರು: ಗೋವುಗಳ ಸಂರಕ್ಷಣೆಗೆ ಕರೊನಾ ಆರ್ಥಿಕ ಸಂಕಷ್ಟದ ಪ್ಯಾಕೇಜ್​ನಡಿ ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ನೊಂದಾಯಿತ ಗೋ-ಶಾಲೆಗಳಿಗೆ 900 ಕೋಟಿ ರೂ. ಆರ್ಥಿಕ ನೆರವು ಘೊಷಿಸಿರುವುದು ಸರ್ಕಾರದ ಐತಿಹಾಸಿಕ ನಡೆ ಎಂದು ಕಾಮಧೇನು ಗೋ ಸೇವಾ ಕೇಂದ್ರದ ಮುಖ್ಯಸ್ಥ ನಾಗೇಶ್ ಆಂಗೀರಸ ಹೇಳಿದ್ದಾರೆ.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕರೊನಾ ಸಂಕಷ್ಟದ ಸಮಯದಲ್ಲಿ ದೇಶದ ಗೋ ಶಾಲೆಗಳು ಎದುರಿಸುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಒತ್ತಡಗಳನ್ನು ವಿವರಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಗೋ ಸಂರಕ್ಷಣೆ ಕುರಿತು ಸರ್ಕಾರದ ಕರ್ತವ್ಯ ಎಚ್ಚರಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಗೋ ಶಾಲೆಗಳಿಗೆ ಆರ್ಥಿಕ ನೆರವು ಘೊಷಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

75 ವರ್ಷಗಳಿಂದ ದೇಶವನ್ನಾಳಿದ ವಿವಿಧ ರಾಜಕೀಯ ಪಕ್ಷಗಳನ್ನು ಗೋ ಸಂರಕ್ಷಣೆಗೆ ಬಿಡಿಗಾಸನ್ನೂ ಕೊಡದೆ ದೊಡ್ಡ ವೈಜ್ಞಾನಿಕ ರೀತಿಯ ಕಸಾಯಿಖಾನೆಗಳನ್ನು ತೆರೆಯಲು ಧನ ಸಹಾಯ ಹಾಗೂ ಸಾಲದ ನೆರವು ನೀಡಲು ಸೀಮಿತವಾಗಿದ್ದಪು. ಪ್ರಸ್ತುತ ನರೇಂದ್ರ ಮೋದಿ ಸರ್ಕಾರದ ಇಂತಹ ಕ್ರಮಗಳು ಕೃಷಿ, ಪರಂಪರೆ, ಮೌಲ್ಯ ಭದ್ರಗೊಳಿಸುವ ಮೆಟ್ಟಿಲುಗಳಾಗಲಿವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net