ಕರೊನಾ ಎಫೆಕ್ಟ್: ಉಡುಪಿ ಸೇನಾ ನೇಮಕಾತಿ ರಾಲಿ ಜನವರಿಗೆ ಮುಂದೂಡಿಕೆ

Army recruitment rally at udupoi 16 MAR 20
Published on

ಉಡುಪಿ: ಕರೊನಾ ವೈರಸ್ Covid19 ತಡೆಗಟ್ಟಲು, ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಏ.4 ರಿಂದ 14ವರೆಗೆ ಜರುಗಲಿದ್ದ ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆ ಮುಂದೂಡಲ್ಪಟ್ಟುದೆ ಎಂದು ಮಂಗಳೂರು ಸೇನೆ ನೇಮಕಾತಿ ವಿಭಾಗದ ಅಧಿಕಾರಿ ಎಫ್.ಪಿ ದುಬಾಷ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸೇನೆ ನೇಮಕಾತಿ ಸಂಬಂಧಿಸಿ ಅಭ್ಯರ್ಥಿಗಳಿಗೆ ಆಯೋಜಿಸಲಾಗಿದ್ದ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ತಿಳಿಸಿದರು.  ಮುಂಬರುವ ಸೆಪ್ಟೆಂಬರ್, ನವಂಬರ್ ತಿಂಗಳಲ್ಲಿ ದೇಶದ ಬೇರೆಬೇರೆ ಕಡೆಗಳಲ್ಲಿ ಈಗಾಗಲೆ ನಿಗಧಿತಗೊಂಡ ರಾಲಿಗಳಂತೆ ನಡೆಯಬೇಕಿರುವುದರಿಂದ ಉಡುಪಿಯಲ್ಲಿ ಮುಂದಿನ ವರ್ಷ ಜನವರಿಯಲ್ಲಿ ನೇಮಕಾತಿ ರಾಲಿ ನಡೆಯಲಿದೆ. ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆಯಬೇಕಿದ್ದ ರಾಲಿಗೆ ರಾಜ್ಯದ ಹನ್ನೊಂದು ಜಿಲ್ಲೆಯ 38,000 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net