ಶರಣರ ಸಂಸ್ಕೃತಿ ಉತ್ಸವದ ಮೆರವಣಿಗೆಗೆ ಕರೊನಾ ಬ್ರೇಕ್

DSC04283
Published on

ಚಿತ್ರದುರ್ಗ: ಅತ್ಯಂತ, ಸಡಗರ ಸಂಭ್ರದಿಂದ ಪ್ರತಿ ವರ್ಷ ನೆರವೇರುತ್ತಿದ್ದ ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಗೆ ಕರೊನಾ ಬ್ರೇಕ್ ಹಾಕಿದೆ. ಯಾವುದೇ ಆಡಂಬರವಿಲ್ಲದೆ ಮುರುಘಾಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು, ಕಾರಿನಲ್ಲಿ ಶ್ರೀ ಮಠದಿಂದ ಮೇಲುದುರ್ಗದ(ಕೋಟೆ)ದಲ್ಲಿರುವ ಮುರುಘಾ ಮಠಕ್ಕೆ ಧಾವಿಸಿದರು. ಅಲ್ಲಿ ಶರಣರಿಗೆ ರಾಜ ವಂಶಸ್ಥರು ಭಕ್ತಿ ಸಮರ್ಪಿಸಿದರು.

ಮಧ್ಯಾಹ್ನ ಮೂರುವರೆ ಸಮಯದಲ್ಲಿ ಶ್ರೀಮಠದಿಂದ ಹೊರಟ ಶರಣರನ್ನು ಮಠದ ಕುರುಬರ ಹಟ್ಟಿ ಗ್ರಾಮಸ್ಥರ ನಂತರ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಿವಾಸ,ವೀರಶೈವ ಸಮಾಜದ ಪ್ರಮುಖ ಕೆ.ವಿ.ಪ್ರಭಾಕರ ಅವರ ನಿವಾಸ,ಗಾಂಧಿ ಸರ್ಕಲ್ ಹಾಗೂ ಉಚ್ಚಂಗಿ ಯಲ್ಲಮ್ಮ ದೇವಾಲಯದ ಬಳಿ ಕೆಲ ನಿಮಿಷಗಳನ್ನು ಕಾರನ್ನು ನಿಲ್ಲಿಸಿದ ಶರಣರು ಭಕ್ತಿ ಸ್ವೀಕರಿಸಿ ಅಲ್ಲಿಂದ ಕೋಟೆಗೆ ಧಾವಿಸಿದರು.

ಈ ಮುನ್ನ ವರ್ಷಗಳಲ್ಲಿ ಜನಪದ ಕಲಾ ಮೇಳಗಳೊಂದಿಗೆ ಬೆಳಗ್ಗೆ 10ರ ಸಮಯಕ್ಕೆ ಶ್ರೀ ಮಠದಿಂದ ಕೋಟೆಯವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯುತ್ತಿತ್ತು. ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಗಾಂಧಿ ಸರ್ಕಲ್‌ನಲ್ಲಿ ಹೆಲಿಕಾಫ್ಟರ್ ಮೂಲಕ ಪುಷ್ಪ ವೃಷ್ಠಿ ಆಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net