

ರಾಯಚೂರು: ಯುಗಾದಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಂದ ತುಂಬಿರುತ್ತಿದ್ದ ಆಂಧ್ರಪ್ರದೇಶದ ಶ್ರೀಶೈಲದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಕರೊನಾ ಎಫೆಕ್ಟ್‌ನಿಂದಾಗಿ ಮಂಗಳವಾರ ಭಕ್ತರಿಲ್ಲದೆ ಭಣಗುಡುತ್ತಿತ್ತು.
ಈಗಾಗಲೇ ರಥೋತ್ಸವ ಹಾಗೂ ಭಕ್ತರಿಗೆ ದರ್ಶನ ರದ್ದುಗೊಳಿಸಲಾಗಿದ್ದು, ಯುಗಾದಿ ನಿಮಿತ್ತ ನಡೆಯಲಿದ್ದ ಉತ್ಸವಗಳನ್ನು ಭಕ್ತರು ಪಾಲ್ಗೊಳ್ಳಲು ಅವಕಾಶವಿಲ್ಲದಂತೆ ಅರ್ಚಕರು ನೆರವೇರಿಸಲು ನಿರ್ಧರಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತರು ಈಗಾಗಲೇ ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿದ್ದು, ಶ್ರೀಶೈಲದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿರುವುದರಿಂದ ಜನರ ಓಡಾಟವಿಲ್ಲಂತಾಗಿದೆ.