ದ.ಕ. ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿ ಸಾವು

corona
Published on

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದೇ ದಿನ ಅತ್ಯಧಿಕ ಕೋವಿಡ್ ಸೋಂಕಿತರ ಮರಣ ಗುರುವಾರ ದಾಖಲಾಗಿದೆ.

ದ.ಕ ಜಿಲ್ಲೆಯಲ್ಲಿ ಗುರುವಾರ 173 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ದ್ವಿಶತಕ ಗಡಿ ದಾಟಿ 201 ತಲುಪಿದೆ.

ಮಂಗಳೂರಿನಲ್ಲಿ 119, ಮೂಡುಬಿದಿರೆ 4, ಮೂಲ್ಕಿ 1, ಬಂಟ್ವಾಳ 21, ಬೆಳ್ತಂಗಡಿ 4, ಪುತ್ತೂರು 13, ಕಡಬ 2, ಸುಳ್ಯ 5 ಮಂದಿ ಹಾಗೂ ಇತರ ಜಿಲ್ಲೆಯ ನಾಲ್ವರು ಸೇರಿದಂತೆ 173 ಮಂದಿ ಪಾಸಿಟಿವ್ ಆಗಿದ್ದಾರೆ. ಗುರುವಾರ ಒಂದೇ ದಿನ 107 ಮಂದಿ ಕರೊನಾ ಮುಕ್ತರಾಗಿ ತೆರಳಿದ್ದಾರೆ.

ಮಂಗಳೂರು ಅತ್ಯಧಿಕ: ಇದುವರೆಗಿನ ಒಟ್ಟು ಕರೊನಾ ಪಾಸಿಟಿವ್ ಪ್ರಕರಣ 6715 ಆಗಿದ್ದರೆ ಅದರಲ್ಲಿ ಮಂಗಳೂರು ತಾಲೂಕಿನ ಪಾಲು 4739. ಮೂಡುಬಿದಿರೆಯ 98, ಮೂಲ್ಕಿ 91, ಬಂಟ್ವಾಳ 627, ಬೆಳ್ತಂಗಡಿ 314, ಪುತ್ತೂರು 316, ಕಡಬ 55, ಸುಳ್ಯದ 82 ಮಂದಿ ಸೇರಿದ್ದಾರೆ. ಇತರ ಜಿಲ್ಲೆಯವರು 393 ಮಂದಿ.

ಕಾಸರಗೋಡಿನ 153 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ 153 ಮಂದಿ ಒಳಗೊಂಡಂತೆ ಕೇರಳದಲ್ಲಿ ಗುರುವಾರ 1298 ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ರಾಜ್ಯದಲ್ಲಿ 29 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೂ ಸೋಂಕು ತಗುಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net