ಕರೊನಾ ನಿಯಂತ್ರಣಕ್ಕೆ ಬಂದ ಮೇಲೆ ಶಾಲೆ ಪ್ರಾರಂಭಿಸಿ

Hanumasagara Govt School Parents Meeting
ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಸಹಿಪ್ರಾ ಶಾಲೆ ವಿದ್ಯಾರ್ಥಿಗಳ ಪಾಲಕರ ಸಭೆ ನಡೆಯಿತು.
Published on

ಹನುಮಸಾಗರ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಸಹಿಪ್ರಾ ಶಾಲೆ ವಿದ್ಯಾರ್ಥಿಗಳ ಪಾಲಕರ ಸಭೆ ನಡೆದು, ಕರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಶಿಕ್ಷಕ ನಂದಲಾಲ ದಲಭಂಜನ ಪ್ರತಿಕ್ರಿಯಿಸಿ, ಈ ತಿಂಗಳ 20ರ ವರೆಗೆ ಹಂತ ಹಂತವಾಗಿ ತರಗತಿವಾರು ಪಾಲಕರ ಸಭೆ ಹಮ್ಮಿಕೊಳ್ಳಲಾಗುವುದು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು. ಎಸ್ಡಿಎಂಸಿ ಅಧ್ಯಕ್ಷ ಸುಭಾಸಚಂದ್ರ ವಡ್ಡರ, ಶಿಕ್ಷಕರಾದ ಮಹಿಬೂಬ ಕಸಾಬ, ಆನಂದಕುಮಾರ, ಮಹಿಬೂಬ ಕಂದಗಲ್ಲ, ಹೂವಪ್ಪ, ಸಾವಿತ್ರಿಬಾಯಿ, ಗಿರಿಜವ್ವ, ಶ್ರೀದೇವಿ, ಉಮಾ ನಾಗೂರ, ಶಿವಲೀಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net