ಕರೊನಾ ನಿಯಂತ್ರಣದವರೆಗೂ ಆರ್ಥಿಕ ನೆರವು ನೀಡಲು ಒತ್ತಾಯಿಸಿದ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಒತ್ತಾಯ

Gangavati Disabled Union Appeal to Help
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಂಗಾವತಿಯಲ್ಲಿ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮಂಗಳವಾರ ಮನವಿ ಸಲ್ಲಿಸಿದರು.
Published on

ಗಂಗಾವತಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ತಾಲೂಕು ಸಮಿತಿ ನಗರದ ಮಿನಿವಿಧಾನಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಸಲ್ಲಿಸಿತು.

ಒಕ್ಕೂಟದ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, ಕರೊನಾ ಮುಂಜಾಗ್ರತೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗವಿಕಲರು ಕೆಲಸ ಕಳೆದುಕೊಂಡಿದ್ದು, ಜೀವನ ನಡೆಸುವುದು ದುಸ್ತರವಾಗಿದೆ. ಆರ್ಥಿಕವಾಗಿ ಹಿಂದುಳಿದ ಅಂಗವಿಕಲ ಕುಟುಂಬಕ್ಕೆ ಸರ್ಕಾರ ನೆರವಾಗಬೇಕಿದ್ದು, ಕರೊನಾ ನಿಯಂತ್ರಣದವರೆಗೂ ಆರ್ಥಿಕ ನೆರವು ೋಷಿಸಬೇಕು. ಪ್ರತಿ ಕುಟುಂಬಕ್ಕೆ ಮಾಸಿಕ 5 ಸಾವಿರ ರೂ., ನೆರವು, ಪಡಿತರ ಚೀಟಿ ಹೊಂದಿದವರಿಗೂ ಪಡಿತರ ಕಿಟ್ ವಿತರಣೆ, ನಿರುದ್ಯೋಗ ಭತ್ಯೆ ಜತೆಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮೀಸಲು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಒಕ್ಕೂಟದ ತಾಲೂಕು ಕಾರ್ಯದರ್ಶಿ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಉಮೇಶ ಜೇಕಿನ್, ಮಲ್ಲಿಕಾರ್ಜುನ, ಹನುಮಂತಪ್ಪ, ಯಮನೂರ, ಖಾದರಪಾಶಾ, ಅಶೋಕ, ಹುಲುಗಪ್ಪ, ಯಲ್ಲಪ್ಪ, ಭಾಷಾ, ನಾಗರಾಜ್ ಹಾಗೂ ಅಂಗವಿಕಲರ ಪಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net