ಕರೊನಾ ನಿಯಂತ್ರಣಕ್ಕೆ ಸಹಕರಿಸಿ - ಅಣ್ಣಾಸಾಹೇಬ ಜೊಲ್ಲೆ

0102101200
Published on

ಚಿಕ್ಕೋಡಿ: ಕರೊನಾ ಸೋಂಕು ನಿಯಂತ್ರಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

ಬುಧವಾರ ಮತಕ್ಷೇತ್ರದ ಜೈನಾಪುರ, ವಡ್ರಾಳ, ಹತ್ತರವಾಟ, ಕರೋಶಿ ಗ್ರಾಮಗಳಿಗೆ ಭೇಟಿ ನೀಡಿ ಕರೊನಾ ತಡೆ ಸಂಬಂಧ ಕೈಗೊಂಡ ವ್ಯವಸ್ಥೆ ಪರಿಶೀಲಿಸಿ ಮಾತನಾಡಿ, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಗ್ರಾಪಂ ಆಡಳಿತ ಮಂಡಳಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿದರು. ತಹಸೀಲ್ದಾರ್ ಸುಭಾಷ ಸಂಪಗಾವಿ, ಆರೋಗ್ಯಾಧಿಕಾರಿ ವಿಠ್ಠಲ ಶಿಂಧೆ, ಸಿಪಿಐ ಆರ್.ಆರ್.ಪಾಟೀಲ, ಕೆ.ಎಸ್. ಪಾಟೀಲ, ಸಿಡಿಪಿಒ ದೀಪಾ ಕಾಳೆ, ವಿಜಯ ಕೋಟಿವಾಲೆ, ಗ್ರಾಪಂ ಅಧ್ಯಕ್ಷ ಸಂಜಯ ಕಾಂಬಳೆ, ಅಶೋಕ ಹರಗಾಪುರೆ, ಗ್ರಾಪಂ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net