ಕರೊನಾ ದೃಢಪಟ್ಟ ಪ್ರದೇಶದಲ್ಲಿ ಕಾಂಗ್ರೆಸ್ ಟಾಸ್ಕ್‌ಪೋರ್ಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಭೇಟಿ

150720 MM Halli Shiraj Shaik Visit Corona Place
ಮರಿಯಮ್ಮನಹಳ್ಳಿ ಸಮೀಪದ ಗಾಳೆಮ್ಮನಗುಡಿ ಗ್ರಾಮಕ್ಕೆ ಕಾಂಗ್ರೆಸ್ ಟಾಸ್ಕ್‌ಪೋರ್ಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
Published on

ಮರಿಯಮ್ಮನಹಳ್ಳಿ: ಸಮೀಪದ ಗಾಳೆಮ್ಮನಗುಡಿ ಗ್ರಾಮದ ಮಹಿಳೆಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಾಸ್ಕ್‌ಪೋರ್ಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಬುಧವಾರ ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು. ಕರೊನಾ ಪಾಸಿಟಿವ್ ಮಹಿಳೆಯ ಮನೆ ಸುತ್ತಲು ನೂರು ಮೀಟರ್ ಅಂತರ ಸೀಲ್‌ಡೌನ್ ಮಾಡಲಾಗಿದ್ದು, ಇಲ್ಲಿನ 14 ಕುಟುಂಬಗಳಿಗೆ ಸ್ಮಯೋರ್ ಕಂಪನಿಯಿಂದ ಆಹಾರ ಸಾಮಗ್ರಿಗಳನ್ನು ಕೊಡಲಾಗುವುದು. ಅಲ್ಲದೇ, ಗ್ರಾಮದಲ್ಲಿ ಸ್ವಚ್ಛತೆ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ವಿರುದ್ದ ಸಾರ್ವಜನಿಕರು ಹೋರಾಟ ನಡೆಸಬೇಕು ಎಂದರು. ಹಫೀಜ್‌ಶೇಕ್, ಸುರೇಶ್ ರಾಥೋಡ್, ಸಿ.ಡಿ.ಯಲ್ಲಪ್ಪ, ದೇವಲಾನಾಯ್ಕ, ಮಜ್ಗಿ ನಾಗರಾಜ್, ಸಿ.ಗಾಳೇಶ್, ಹಳ್ಳಿ ನಿಂಗಪ್ಪ ಹಾಗೂ ಸ್ಮಯೋರ್ ಕಂಪನಿಯ ಅಧಿಕಾರಿಗಳು ಇದ್ದರು.

ಮತ್ತೊಬ್ಬರಿಗೆ ಕರೊನಾ ಸೋಂಕು ದೃಢ
ಕಂಪ್ಲಿ: ಪಟ್ಟಣದ ತಳವಾರ ಓಣಿಯ 64ವರ್ಷದ ವ್ಯಕ್ತಿಗೆ ಮಂಗಳವಾರ ರಾತ್ರಿ ಕರೊನಾ ಸೋಂಕು ದೃಢಪಟ್ಟಿದೆ. ಇವರು ಅಸ್ತಮಾದಿಂದ ಬಾಧಿತರಾಗಿ ಗಂಗಾವತಿಗೆ ಚಿಕಿತ್ಸೆಗೆ ತೆರಳಿದ್ದಾಗ, ಮೂರು ದಿನಗಳ ಹಿಂದೆ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕಿತ ವ್ಯಕ್ತಿಯನ್ನು ಮಂಗಳವಾರ ತಡ ರಾತ್ರಿ ಬಳ್ಳಾರಿಯ ಡೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತನ ಮನೆ ಸೀಲ್‌ಡೌನ್ ಮಾಡಲಾಗಿದ್ದು, ರ‌್ಯಾಪಿಡ್ ರೆಸ್ಪಾನ್ಸ್ ತಂಡದ ಡಾ.ಮಲ್ಲೇಶಪ್ಪ, ಪುರಸಭೆ ಅಧಿಕಾರಿಗಳು ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net