113 ಮಂದಿಗೆ ಕರೊನಾ ದೃಢ, ಉಡುಪಿಯಲ್ಲಿ ಏರುತ್ತಿದೆ ಕೋವಿಡ್ ಪ್ರಕರಣ

Corona logo 3
Published on

ಮಂಗಳೂರು/ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ 113 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಇದರಲ್ಲಿ 72 ಮಂದಿ ಮಣಿಪಾಲ ಎಂಐಟಿ ಕ್ಯಾಂಪಸ್‌ನ ವಿದ್ಯಾರ್ಥಿಗಳು. ಈ ಹಿಂದೆ ಪಾಸಿಟಿವ್ ಬಂದಿದ್ದ ಪ್ರಾಥಮಿಕ ಸಂಪರ್ಕ ಇದ್ದವರಲ್ಲಿ ಬಹುತೇಕರು ಸೋಂಕಿತರಾಗಿದ್ದಾರೆ. ಒಟ್ಟು 372 ವಿದ್ಯಾರ್ಥಿಗಳು ಈವರೆಗೆ ಕೋವಿಡ್ ಸೋಂಕಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,328ಕ್ಕೆೆ ಏರಿಕೆಯಾಗಿದೆ. 2741 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, 32 ಮಂದಿ ಆಸ್ಪತ್ರೆಯಿಂದ ಗುಣವಾಗಿ ಮನೆಗೆ ಹೋಗಿದ್ದಾರೆ. ಜಿಲ್ಲೆಯಲ್ಲಿ 439 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಹಲವು ದಿನಗಳ ಬಳಕ ಕೋವಿಡ್ ಸೋಂಕಿತರೊಬ್ಬರು ದ.ಕ. ಜಿಲ್ಲೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಈ ದಿನ ಜಿಲ್ಲೆಯಲ್ಲಿ 31 ಮಂದಿಗೆ ಕೋವಿಡ್ ದೃಢಪಟ್ಟಿದೆ. 30 ಮಂದಿ ಗುಣವಾಗಿದ್ದಾರೆ. ಸದ್ಯ 527 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net