ಮಂಡ್ಯ: ಕರೊನಾ ಸೋಂಕು ಶನಿವಾರ ಜಿಲ್ಲೆಯಲ್ಲಿ 4 ಜನರಿಗೆ ದೃಢಪಟ್ಟಿದ್ದರೆ, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಸಕ್ರಿಯ ಪ್ರಕರಣಗಳ 43ಕ್ಕೆ ಏರಿಕೆಯಾಗಿದೆ. ಶನಿವಾರ ಸೋಂಕು ದೃಢಪಟ್ಟ ನಾಲ್ವರು ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಕೆ.ಆರ್.ಪೇಟೆ, ಪಾಂಡವಪುರ ತಾಲೂಕಿನವರು.
ಪಿ.8312 ಪುರುಷ (49 ವರ್ಷ), ಪಿ.8313 ಯುವಕ (17ವರ್ಷ), ಪಿ.8314 ಮಹಿಳೆ (39 ವರ್ಷ), ಪಿ.8315 ಬಾಲಕ (18)ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 364ಕ್ಕೆ ಏರಿಕೆಯಾಗಿದ್ದು, ಇದೇ ಪಿ.3919, 3921, 3925 ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಜಿಲ್ಲೆಯ ಒಬ್ಬ, ಮಿಮ್ಸ್ ಐಸೋಲೇಷನ್ ವಾರ್ಡ್‌ನಲ್ಲಿ 43 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈತನಕ 13,810 ಜನರ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು, 12,982 ಜನರ ಫಲಿತಾಂಶ ನೆಗೆಟಿವ್ ಬಂದಿದೆ. 467 ಜನರ ಫಲಿತಾಂಶ ಬರಬೇಕಿದೆ. ವಸತಿ ಶಾಲೆ ಕ್ವಾರಂಟೈನ್‌ನಲ್ಲಿ 280 ಜನರಿದ್ದಾರೆ. 5312 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.