ಕರೊನಾ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಮಂಕು

140820 Kushtagi National Flag, Stickers Shop
ಧ್ವಜ, ಶಾಲು ಹಾಗೂ ಸ್ಟಿಕ್ಕರ್‌ಗಳನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಕುಷ್ಟಗಿಯ ವ್ಯಾಪಾರಿಯೊಬ್ಬರು ಗ್ರಾಹಕರ ಬರುವಿಕೆಗೆ ಕಾಯುತ್ತ ಕುಳಿತ ದೃಶ್ಯ ಶುಕ್ರವಾರ ಕಂಡುಬಂತು.
Published on

ಕುಷ್ಟಗಿ: ಕರೊನಾ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ ಕಳೆಗುಂದಿದೆ. ದಿನಾಚರಣೆಯ ಮುನ್ನಾ ದಿನ ಕಂಡುಬರುತ್ತಿದ್ದ ಸಂಭ್ರಮ ತಾಲೂಕಿನ ಎಲ್ಲಿಯೂ ಕಾಣದಂತಾಗಿದ್ದು, ಶಾಲೆ ಕಾಲೇಜು ಸೇರಿ ವಿವಿಧ ಇಲಾಖೆ ಸಂಘ, ಸಂಸ್ಥೆಗಳಲ್ಲಿ ಔಪಚಾರಿಕ ಆಚರಣೆಗೆ ತಯಾರಿ ನಡೆಸಲಾಗುತ್ತಿದೆ.

ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ದೇಶ ಸ್ವತಂತ್ರಗೊಂಡ ದಿನದ ಸಂಭ್ರಮಾಚರಣೆ ಮೇಲೆಯೂ ಕರೊನಾ ಪರಿಣಾಮ ಬೀರಿರುವುದು ದೇಶಾಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

ವ್ಯಾಪಾರವೂ ಇಲ್ಲ: ಧ್ವಜಾರೋಹಣ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜ, ತ್ರಿವರ್ಣವಿರುವ ಶಾಲುಗಳು ಸೇರಿ ವಿವಿಧ ಸ್ಟಿಕ್ಕರ್‌ಗಳ ಮಾರಾಟ ಜೋರಾಗಿರುತ್ತಿತ್ತು. ಈ ವರ್ಷ ಕೊಳ್ಳುವವರೇ ಇಲ್ಲದೆ ವ್ಯಾಪಾರಿಗಳು ಖಾಲಿ ಕುಳಿತ ದೃಶ್ಯಗಳು ಕಂಡುಬರುತ್ತಿವೆ. ವಿದ್ಯಾರ್ಥಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಕಾರಣ ಹೂಗಳನ್ನೂ ಕೊಳ್ಳುವವರಿಲ್ಲದಂತಾಗಿದೆ. ಶಾಲೆ ಕಾಲೇಜುಗಳ ಆವರಣದಲ್ಲಿ ತಳಿರು ತೋರಣ ಕಟ್ಟುವುದು, ರಂಗೋಲಿ ಬಿಡಿಸುವುದು ಇತ್ಯಾದಿ ದೃಶ್ಯಗಳಿಗೆ ಕರೊನಾ ಕಡಿವಾಣ ಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net