ಕರೊನಾ ಜಾಗೃತಿಯ ಕಾರ್ಯ ಶ್ಲಾಘನೀಯ - ಶಾಸಕ ಹಾಲಪ್ಪ ಆಚಾರ್ ಪ್ರಶಂಸೆ

Kukanuru Halappa Acharya Food Issue
Published on

ಕುಕನೂರು: ಕರೊನಾ ಕಟ್ಟೆಚ್ಚರ ಪಾಲನೆ ಹಾಗೂ ಜಾಗೃತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು. ಪಟ್ಟಣದಲ್ಲಿ ಶನಿವಾರ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ಉಪಾಹಾರ ವಿತರಿಸಿ ಮಾತನಾಡಿದರು. ನಿತ್ಯ ಜನರನ್ನು ಮನೆಯಲ್ಲಿರುವಂತೆ ಪ್ರತಿ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಕರೊನಾ ಎಂಬುದು ಮಹಾಮಾರಿ. ಅಂತಹ ಭಯಾನಕ ರೋಗದಿಂದ ಪಾರಾಗಲು ಜನ ಸಂಪರ್ಕದಿಂದ ದೂರವಿರಬೇಕು. ಸಾಮಾಜಿಕ ಅಂತರ, ಸಂಚಾರ ಮಾಡದಿರುವುದು ಮುನ್ನೆಚ್ಚರಿಕಾ ಕ್ರಮಗಳು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರಸ್ತೆಯಲ್ಲಿ ಸಂಚರಿಸುವವರಿಗೆ ಕಟ್ಟೆಚ್ಚರ ನೀಡುತ್ತಿದ್ದಾರೆ. ಅದೇ ರೀತಿ ಅಗ್ನಿ ಶಾಮಕ ಸಿಬ್ಬಂದಿ ಬಿಸಿಲು ಲೆಕ್ಕಿಸದೆ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಇವೆಲ್ಲಾ ಕಾರ್ಯಗಳು ಜನರ ಆರೋಗ್ಯದ ಹಿತಕ್ಕಾಗಿ ಎಂದರು. ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net