VIDEO | ಇದು ಚರಿತ್ರೆ ಸೃಷ್ಟಿಸೋ ಅವಕಾಶ...: ಕರೊನಾ ಜಾಗೃತಿ ಹಾಡು ಕೇಳಿ

nagachandrika bhat mar 20
Published on

ಬೆಂಗಳೂರು: ಕರೊನಾ ವೈರಸ್​ ಮಾರಿಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನತಾ ಕರ್ಫ್ಯೂ ಉಲ್ಲಂಘಿಸದೆ ಅನುಸರಿಸುವಂತೆ ಗಾಯಕಿ ನಾಗಚಂದ್ರಿಕಾ ಭಟ್​, ಅಚಿಂತ್ಯ ಭಟ್ ಹಾಗೂ ಅರ್ಣವ ಭಟ್ ಹಾಡು ರಚಿಸಿ ಅದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರದ ಹೆಸರಾಂತ ಗೀತೆಯಾದ ಇದು ಚರಿತ್ರೆ ಸೃಷ್ಟಿಸೋ ಅವತಾರ ಹಾಡಿನ ಟ್ಯೂನ್​ ಬಳಸಿಕೊಂಡು ಕರೊನಾ ವೈರಸ್​ ತಡೆಯುವ ಜಾಗೃತಿ ಗೀತೆ ರಚನೆ ಮಾಡಿ ಹಾಡಿದ್ದಾರೆ.

ಜಾಗೃತಿ ಮೂಡಿಸುವ ಹಾಡಿನ ಸಾಹಿತ್ಯ ಹೀಗಿದೆ.

ಕೇಳಿ, ಓ ದೇಶ ಬಾಂಧವರೆ

ಕೊರೋನಾ ಕೇಳಿ ಅರಿತವರೆ

ಮನೆಯಲ್ಲೇ ಇದ್ದು ಬಿಡಿ, ಹೊರಹೋಗಬೇಡಿ

ಹಾಗಿರುವುದೊಂದು ಸುರಕ್ಷತೆ...

ಗಾಳಿ ಮಾತಿನ ಬಜಾರು

ಸುದ್ದಿ ಸಾರಿದೆ ಸುಮಾರು

ಸಮಾಜದ ಜವಾಬ್ದಾರಿ ಇರೋರು

ಜನತಾ ಕರ್ಫ್ಯೂ ಪಾಲಿಸುವರು...

ಹ್ಯಾಂಡ್ಸಪ್ ಇದು ನಮ್ಮ ಭಾರತ

ಹ್ಯಾಂಡ್ಸಪ್ ಮನೇಲಿರು ಭಾರತ

ಹ್ಯಾಂಡ್ಸಪ್ ಅದುವೆ ಸುರಕ್ಷತಾ

ಇದು ಚರಿತ್ರೆ ಸೃಷ್ಟಿಸೋ ಅವಕಾಶ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net