ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 437ಕ್ಕೆ ಏರಿಕೆ

17-rpd 1
Published on

ಕೋಲಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಒಬ್ಬ ಮೃತಪಟ್ಟು 32 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಎಸ್‌ಎನ್‌ಆರ್ ಆಸ್ಪತ್ರೆಗೆ ಜು. 11ರಂದು ದಾಖಲಾಗಿದ್ದ ಕೋಲಾರದ ನಿವಾಸಿ ಪಿ-39805 (75 ವರ್ಷ) ವೃದ್ಧ ವಿಷಮ ಶೀತಜ್ವರದ ಕಾರಣದಿಂದ ಮೃತಪಟ್ಟಿದ್ದಾರೆ.

ಕೋಲಾರ ತಾಲೂಕಿನಲ್ಲಿ 13 ಮಂದಿಗೆ ಸೋಂಕು ಕಾಣಿಸಿಕೊಂಡರೆ, ಮಾಲೂರಿನಲ್ಲಿ ಇಬ್ಬರು, ಬಂಗಾರಪೇಟೆಯಲ್ಲಿ 6, ಕೆಜಿಎಫ್‌ನಲ್ಲಿ 3, ಮುಳಬಾಗಿಲು ಮತ್ತು ಶ್ರೀನಿವಾಸಪುರದಲ್ಲಿ ತಲಾ 4 ಮಂದಿಗೆ ಸೋಂಕು ದೃಢಪಟ್ಟು ಒಟ್ಟು ಸೋಂಕಿತರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ.

ಕೆಜಿಎಫ್‌ನಲ್ಲಿ 3 ಮಂದಿಗೆ ವಿಷಮ ಶೀತಜ್ವರ (ಐಎಲ್‌ಐ ), ಮುಳಬಾಗಿಲಿನಲ್ಲಿ 3 ಐಎಲ್‌ಐ ಪ್ರಕರಣ ದಾಖಲಾಗಿದ್ದು, 19 ವರ್ಷದ ಯುವಕನಿಗೆ ಸೋಂಕಿನ ಮೂಲ ತನಿಖಾ ಹಂತದಲ್ಲಿದೆ. ಶ್ರೀನಿವಾಸಪುರದಲ್ಲಿ 40 ವರ್ಷದ ಆರೋಗ್ಯ ಕಾರ್ಯಕರ್ತೆ, ಪ್ರಾಥಮಿಕ ಸಂಪರ್ಕದಿಂದ 32 ವರ್ಷದ ವ್ಯಕ್ತಿ, ಅಂತರ ಜಿಲ್ಲಾ ಪ್ರಯಾಣದಿಂದ 20 ವರ್ಷದ ಯುವಕನಿಗೆ ಸೋಂಕು ತಲುಗಿದ್ದು, 39 ವರ್ಷದ ಪುರುಷನ ಸೋಂಕಿನ ಮೂಲ ತನಿಖಾ ಹಂತದಲ್ಲಿದೆ.

ಕೋಲಾರದಲ್ಲಿ ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆಯ ನಾಲ್ಕು ಮಂದಿ, ಸಂಪರ್ಕದಿಂದ 4 ಮಂದಿಗೆ, ಐಎಲ್‌ಐ ಪ್ರಕರಣ 4 ಹಾಗೂ 1 ಪ್ರಕರಣ ತನಿಖಾ ಹಂತದಲ್ಲಿದೆ. ಮಾಲೂರಿನಲ್ಲಿ 2 ಐಎಲ್‌ಐ ಪ್ರಕರಣ ಹಾಗೂ ಬಂಗಾರಪೇಟೆಯಲ್ಲಿ ಅಂತರಜಿಲ್ಲಾ ಪ್ರಯಾಣ ಹಿನ್ನೆಲೆ 1, ಸೋಂಕಿನ ಮೂಲ ತಿಳಿಯದ 2 ಪ್ರಕರಣ, ಸಂಪರ್ಕದ ಕಾರಣದಿಂದ 2 ಮಂದಿಗೆ ಸೋಂಕು ಹರಡಿದೆ.

13 ಮಂದಿ ಗುಣ: ಕೋಲಾರದ 9, ಮಾಲೂರು 1 ಹಾಗೂ ಮುಳಬಾಗಿಲಿನಲ್ಲಿ 3 ಮಂದಿ ಸೇರಿ ಒಟ್ಟು 13 ಮಂದಿ ಗುಣವಾಗಿದ್ದು, ಒಟ್ಟು ಇಲ್ಲಿಯವರೆಗೆ ಗುಣವಾದವರ ಸಂಖ್ಯೆ 156ಕ್ಕೆ ಏರಿದೆ. ಒಟ್ಟು 272 ಸಕ್ರಿಯ ಪ್ರಕರಣಗಳಿವೆ.

ಜಾಲಪ್ಪ ಆಸ್ಪತ್ರೆ: ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಒಬ್ಬ ಸೋಂಕಿತ ಮೃತಪಟ್ಟಿದ್ದಾನೆ. 4 ಹೊಸ ಪ್ರಕರಣಗಳು ದೃಢಪಟ್ಟಿದೆ. ಒಂದೇ ದಿನ 4 ಮಂದಿ ಗುಣವಾಗಿದ್ದಾರೆ. ಇದರೊಂದಿಗೆ ಒಟ್ಟು 164 ಸೋಂಕಿತರಲ್ಲಿ 125 ಸಕ್ರಿಯ ಪ್ರಕರಣಗಳಿವೆ. 17 ಮಂದಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net