

ಕಲಬುರಗಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಕಲಬುರಗಿಗೆ ಭೇಟಿ ನೀಡಿ ೨೫ರಂದು ಕಲಬುರಗಿಯಲ್ಲಿ ಸಹಕಾರ ಇಲಾಖೆಯ ಕಲಬುರಗಿ ಪ್ರಾಂತೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ರಾಯಚೂರ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಪ್ರಕಟಣೆ ತಿಳಿಸಿದೆ.
೨೫ರಂದು ಮಧ್ಯಾಹ್ನ ೩ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಹಿರಿಯ ಸಹಕಾರಿಗಳೊಂದಿಗೆ ಈ ಪ್ರಾಂತದ ಸಹಕಾರ ಚಳುವಳಿಯ ಸಮಗ್ರ ಅಭಿವೃದ್ಧಿ ಕುರಿತು ಸಂವಾದ ನಡೆಸಲಿದ್ದಾರೆ. ಈ ಮೂಲಕ ಸಹಕಾರ ಚಳುವಳಿಯ ಬೆಳವಣಿಗೆ ಮೇಲೆ ಬೆಳಕು ಚೆಲ್ಲಲು ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.