ಕೊಡಗು ಕೊಡಗಾಗಿಯೇ ಉಳಿಯಬೇಕು

coorg vishion
Published on

ಮಡಿಕೇರಿ:

ಕೊಡಗಿನ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ಕೊಡಗು ಕೊಡಗಾಗಿಯೇ ಉಳಿಯಬೇಕು ಎನ್ನುವುದಷ್ಟೇ ನಮ್ಮ ಕಾಳಜಿ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಕೆಲಸ ಮಾಡಲಾಗುವುದು ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕೊಡಗು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಇಲ್ಲಿನ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೂರ್ಗ್ ವಿಷನ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸಹಭಾಗಿತ್ವದ ಯೋಜನೆ ಜಾರಿ ಸಂಬAಧ ರಾಜ್ಯ ಸರ್ಕಾರದ ಜತೆ ಮಾತುಕತೆಗೆ ಸದಾ ಸಿದ್ಧವಿದ್ದು ಸ್ಥಳೀಯ ಶಾಸಕರೊಂದಿಗೆ ಸೇರಿಕೊಂಡು ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸಲು ತಮಗೇನೂ ಅಭ್ಯಂತರ ಇಲ್ಲ. ಜಲಜೀವನ್ ಮಿಷನ್ ಅನುಷ್ಠಾನ ಕೊಡಗಿನಲ್ಲಿ ತೃಪ್ತಿದಾಯಕವಾಗಿಲ್ಲ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ಕೊಡಲಾಗಿದೆ. ಮತ್ತೊಮ್ಮೆ ಅಧಿಕಾರಿಗಳ ಜತೆ ಈ ವಿಷಯ ಚರ್ಚಿಸಿ ಸಮರ್ಪಕ ಅನುಷ್ಠಾನಕ್ಕೆ ಸೂಚಿಸಲಾಗುವುದು. ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ 2027ರ ಮಾರ್ಚ್ ವೇಳೆಗೆ ಸಾರ್ವಜನಿಕ ಬಳಕೆಗೆ ಲಭ್ಯ ಆಗಲಿದೆ ಎಂದರು.

ಕೇಂದ್ರ ಸರ್ಕಾರದ ಸರ್ಫೇಸಿ ಕಾಯಿದೆ ಕಾಫಿ ಬೆಳೆಗಾರರ ಪಾಲಿಗೆ ಕಂಟಕವಾಗಿದ್ದು, ಕಾಫಿ ಬೆಳೆಗಾರರನ್ನು ಈ ಕಾಯಿದೆಯಿಂದ ರಕ್ಷಿಸಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಯದುವೀರ್, ಸರ್ಫೇಸಿ ಕಾಯಿದೆ ವಾಣಿಜ್ಯ ಉದ್ದೇಶಕ್ಕೆ ಸಂಬAಧಿಸಿದAತೆ ಇದೆ. ಕÀರ್ನಾಟಕದಲ್ಲಿ ಕಾಫಿ ವಾಣಿಜ್ಯ ಬೆಳೆ ಆಗಿರುವುದರಿಂದ ಸಮಸ್ಯೆ ಆಗಿದೆ. ಕಾಫಿಯನ್ನು ಕೃಷಿ ಎಂದು ರಾಜ್ಯ ಸರ್ಕಾರ ಪರಿಗಣಿಸಿದಾಗ ಕಾಫಿಗೆ ಸರ್ಫೆಸಿ ಕಾಯಿದೆ ಅನ್ವಯ ಆಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮನಸ್ಸು ಮಾಡಬೇಕು. ಕಾಫಿಯನ್ನು ವಾಣಿಜ್ಯ ಬೆಳೆ ಪಟ್ಟಿಯಿಂದ ಕೈಬಿಟ್ಟು ಕೃಷಿ ಉತ್ಪನ್ನದ ಪಟ್ಟಿಗೆ ಸೇರಿಸಬೇಕು. ಆಗ ಸಮಸ್ಯೆ ಬಗೆಹರಿಯಲಿದೆ.

ಆದರೂ ಈ ಕಾಯಿದೆ ದುರ್ಬಳಕೆ ಮಾಡದಂತೆ ಲೀಡ್ ಬ್ಯಾಂಕ್ ಮೂಲಕ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಸಾಲ ವಸೂಲಾತಿ ಮೊದಲ ಆದ್ಯತೆ ಆಗಬೇಕು. ಸಾಲ ಕಟ್ಟದವರ ಆಸ್ತಿ ವಶಪಡಿಸಿಕೊಳ್ಳುವುದು ಬ್ಯಾಂಕ್‌ಗಳ ಕೊನೆಯ ಅಸ್ತç ಆಗಿರಬೇಕು ಎನ್ನುವ ಸಂದೇಶ ಬ್ಯಾಂಕ್‌ಗಳಿಗೆ ರವಾನಿಸಲಾಗಿದೆ. ಕೊಡಗಿನಲ್ಲಿ ಈ ತನಕ ಸರ್ಫೇಸಿ ಕಾಯಿದೆ ಅಡಿಯಲ್ಲಿ ಯಾವುದೇ ಆಸ್ತಿ ಬ್ಯಾಂಕ್‌ಗಳು ವಶಪಡಿಸಿಕೊಂಡಿಲ್ಲ ಎಂದು ಹೇಳಿದರು.

ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುವ ಕರಿಮೆಣಸು ಮತ್ತು ಅಡಿಕೆಗೆ ವಿಮಾ ಸೌಲಭ್ಯ ಇದೆ. ಆದರೆ ಕಾಫಿ ವಿಮೆಯಿಂದ ವಂಚಿತವಾಗಿದೆ ಎನ್ನುವ ಬೆಳೆಗಾರರ ಅಹವಾಲಿಗೆ ಸ್ಪಂದಿಸಿದ ಸಂಸದರು ಕಾಫಿಯನ್ನು ಕೂಡ ವಿಮಾ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಸಂಬAಧಿಸಿದ ಸಚಿವರಿಗೆ ಇದೇ ಅಧಿವೇಶನದಲ್ಲಿ ಗಮನಕ್ಕೆ ತರಲಾಗುವುದು. ಪ್ರಾಕೃತಿಕ ವಿಕೋಪ ಸಂದರ್ಭ ಕಾಫಿ ಬೆಳೆಗಾರರಿಗೆ ಪರಿಹಾರ ವಿತರಣೆ ವೇಳೆ ಎನ್‌ಡಿಆರ್‌ಎಫ್ ಮಾನದಂಡದಲ್ಲಿ ಸಡಿಲಿಕೆಗೆ ಇರುವ ಅವಕಾಶಗಳ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶ ಇದ್ದು ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ನಡೆಸಬೇಕು ಎನ್ನುವ ಚೇಂಬರ್ ಆಫ್ ಕಾಮರ್ಸ್, ಆತಿಥ್ಯ ವಲಯದ ಪ್ರಮುಖರ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಯದುವೀರ್, ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಬೇಕಾಗಿಲ್ಲ. ಬದಲಿಗೆ ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿಯ ಸಂಸ್ಕೃತಿ, ಪರಿಸರವನ್ನು ಅದ್ಭುತ ವ್ಯವಸ್ಥೆಗಳ ಮೂಲಕ ಉತ್ತಮ ಪಡಿಸುವ ಕೆಲಸ ಮಾಡಬೇಕು. ಸ್ಥಳೀಯ ಹೋಮ್ ಸ್ಟೇ ಉದ್ಯಮಕ್ಕೆ ಪ್ರೋತ್ಸಾಹ ಕೊಡುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಗೆ ಒಬ್ಬ ಪರಿಸರ ಸ್ನೇಹಿಯಾಗಿ ವಿರೋಧ ಇದೆ. ಮಡಿಕೇರಿ ಕೋಟೆ ವಸ್ತು ಸಂಗ್ರಾಹಲಯ ಆಗಬೇಕು. ಅಮೂಲ್ಯವಾದ ಈ ಕೋಟೆಯ ಸಂರಕ್ಷಣೆ ಆಗಬೇಕು. ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣದ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ಇದೆ. ವಿಷಯವನ್ನು ಪತ್ರದ ಮೂಲಕ ಸಂಬAಧಿಸಿದವರ ಗಮನ ಸೆಳೆಯಲಾಗಿದೆ. ಈ ವಿಷಯದಲ್ಲಿ ಬೀದಿಗೆ ಇಳಿದು ಹೋರಾಟ ನಡೆಸಲು ಕೂಡ ತಾವು ಸಿದ್ಧವಿರುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದಿಂದ ಲಭ್ಯವಿರುವ ಯೋಜನೆಗಳಲ್ಲಿ ಇರುವ ಅವಕಾಶದ ಒಳಗೆ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆ ಮಾಡಲಾಗುವುದು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ 2 ಜಾಗ ಗುರುತಿಸಲಾಗಿದ್ದು, ಒಂದು ಸ್ಥಳ ಆಯ್ಕೆ ಮಾಡುವ ಸಂಬAಧ ಪರಿಶೀಲನೆ ನಡೆದಿದೆ. ಕೊಡಗಿಗೆ ರೈಲ್ವೆ ಸಂಪರ್ಕ ಸಂಬAಧ ರಾಜ್ಯ ಸರ್ಕಾರದ ಜತೆ ನಿಕಟ ಸಂಪರ್ಕದಲ್ಲಿದ್ದೇನೆ. ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ಜಮೀನು ವಶಪಡಿಸಿಕೊಟ್ಟರೆ ಬೆಳಗೊಳ-ಕುಶಾಲನಗರ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ. ಶ್ರವಣಬೆಳಗೊಳ-ಕುಶಾಲನಗರ ರೈಲ್ವೆ ಮಾರ್ಗಕ್ಕೂ ಡಿಪಿಆರ್ ತಯಾರಿಸಲು ಸಿದ್ಧತೆ ನಡೆದಿದೆ.

ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕರಿಸಬೇಕು. ರಾಜ್ಯ ಸರ್ಕಾರ ಭೂಮಿ ಒದಗಿಸಿಕೊಟ್ಟರೆ ವೇಗವಾಗಿ ಕೆಲಸ ಮಾಡಲಾಗುವುದು. ಭಾರತಮಾಲ ಯೋಜನೆ ಅಡಿಯಲ್ಲಿ ಕೊಡಗಿನೊಳಗೆ ರಸ್ತೆ ಮಾಡಲು ಅರಣ್ಯ ಭೂಮಿಯ ಸಮಸ್ಯೆ ಇದೆ. ಮಡಿಕೇರಿ-ಮೈಸೂರು ಮಧ್ಯೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಬಗ್ಗೆ ಗಮನ ಹರಿಸಲಾಗುವುದು. ಈ ಘಟಕದ ಮೂಲಕ ತ್ಯಾಜ್ಯ ಮರುಬಳಕೆಯ ಗುರಿಯೂ ಇದೆ. ಕೊಡಗಿನಲ್ಲಿಪ್ರವಾಸೋದ್ಯಮ ಮತ್ತು ಕಾಫಿಗೆ ಸಂಬAಧಿಸಿದ ಸ್ಟಾರ್ಟ್ಅಪ್ ಸ್ಥಾಪನೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಬೇಡಿಕೆ ಇರುವ ಇಎಸ್‌ಐ ಆಸ್ಪತ್ರೆ ವಿಷಯ ಸ್ಥಾಪನೆಗೆ ಸಂಬAಧಿಸಿದAತೆ ಸಂಬAಧಿಸಿದ ಇಲಾಖೆಯಲ್ಲಿ ಪ್ರಸ್ತಾಪ ಮಾಡಲಾಗುವುದು. ಆನ್‌ಲೈನ್ ಔಷಧಿ ವ್ಯಾಪಾರಕ್ಕಿಂತಲೂ ಸ್ಥಳೀಯ ಹೊಟೇಲ್‌ಗಳಿಂದ ಮನೆ ಮನೆಗೆ ಆಹಾರ ತಲುಪಿಸುವ ರೀತಿಯಲ್ಲಿ ಸ್ಥಳೀಯ ಔಷಧಿ ಅಂಗಡಿಗಳಿAದ ಅಗತ್ಯವಿರುವವರ ಮನೆಗನೆಗಳಿಗೆ ಔಷಧಿ ತಲುಪಿಸುವ ವ್ಯವಸ್ಥೆ ಮಾಡುವ ಅಗತ್ಯವಿದೆ. ಬಾಂಗ್ಲಾ ವಲಸಿಗ ಕಾರ್ಮಿಕರ ಸಮಸ್ಯೆ ಬಗ್ಗೆ ಈಗಾಗಲೇ ಕೇಂದ್ರ ಗೃಹ ಮಂತ್ರಿ ಜತೆ ಚರ್ಚೆ ನಡೆಲಾಗಿದೆ.

ಈ ಸಮಸ್ಯೆ ಪರಿಹರಿಸಲು ಕಾಫಿ ಬೆಳೆಗಾರರೂ ಸಹಕರಿಸಬೇಕು. ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಕಿ ಸೂಕ್ತ ಸ್ಥಳ ಒದಗಿಸಿದರೆ ಬಸ್ ತಂಗುದಾಣ, ಶೈತ್ಯಾಗರ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಕೊಡಗಿನಲ್ಲಿ ಬಿಎಸ್‌ಎನ್‌ಎಲ್ ಸೇವೆಗೆ ಸಂಬAಧಿಸಿದ ಎಲ್ಲಾ ಸಮಸ್ಯೆಗಳನ್ನು ಈ ವರ್ಷದ ಕೊನೆಗೆ ಬಗೆಹರಿಸಲಾಗುವುದು. ಜಿಲ್ಲೆಗೆ 15 ಜನರೇಟರ್, 18 ಬ್ಯಾಟರಿಗಳು, ಅಗತ್ಯವಿರುವ ಕಡೆಗೆ ಟವರ್‌ಗಳು ಸಿಗಲಿದೆ. ಈ ಬಗ್ಗೆ ಸಂಬAಧಿಸಿದ ಸಚಿವರ ಜತೆ ಚರ್ಚೆಯನ್ನೂ ಮಾಡಲಾಗಿದೆ. ಕಾಫಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಆಂತರಿಕ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಕಾಫಿಯ ಬ್ರಾಂಡಿAಗ್ ಆಗಬೇಕು. ಕಾಫಿ ಸಂಬAಧಿತ ಉತ್ಪನ್ನಗಳಿಗೂ ಪ್ರೋತ್ಸಾಹ ಸಿಗಬೇಕು ಎಂದರು.

ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶುಕ್ರವಾರ ಸಂಜೆ ಪ್ರಕಟವಾದ 71ನೇ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಕಂದೀಲು ಚಿತ್ರದ ನಿರ್ದೇಶಕಿ ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಯಶೋಧ, ತಾನು ರಾಷ್ಟçಪ್ರಶಸ್ತಿ ಪಡೆದ ರಾಜ್ಯದ ಮೂರನೇ ನಿರ್ದೇಶಕಿ ಮತ್ತು ಕೊಡಗಿನ ಪ್ರಥಮ ನಿರ್ದೇಶಕಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಒಬ್ಬ ಮಹಿಳಾ ನಿರ್ದೇಶಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಈ ಕ್ಷೇತ್ರದತ್ತ ಮತ್ತಷ್ಟು ಮಹಿಳೆಯರು ಆಕರ್ಷಿತವಾಗುವುದಕ್ಕೆ ಸ್ಫೂರ್ತಿ ಆಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net