ಸಂಘಗಳ ಸಾಧನೆಗೆ ಹೊಂದಾಣಿಕೆ ಅವಶ್ಯ

25NLT1
Published on

ನಾಲತವಾಡ : ಒಕ್ಕೂಟದ ಪದಾಧಿಕಾರಿಗಳು ತಮಗೆ ಒದಗಿಸಿದ ಹುದ್ದೆ, ಹಣಕಾಸು ನಿರ್ವಹಣೆ, ವಸೂಲಾತಿ ಮತ್ತು ದಾಖಲಾತಿಗಳನ್ನು ಜವಾಬ್ದಾರಿಯಿಂದ ನಿಭಾಯಿಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ. ಹೇಳಿದರು.

ಇಲ್ಲಿಯ ವೀರೇಶ್ವರರ ಮಹಾಮನೆಯಲ್ಲಿ ಹಮ್ಮಿಕೊಂಡಿದ ವಲಯಮಟ್ಟದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ಒಕ್ಕೂಟದವರು ಮೊದಲು ಕ್ಷೇತ್ರದ ಹಿನ್ನೆಲೆ ಅಧ್ಯಯನ ಮಾಡಬೇಕು. ಸಾಲ ಕೊಡಿಸುವ ಕೆಲಸವೇ ಮೊದಲ ಆದ್ಯತೆ ಆಗಬಾರದು, ಸಂಘಗಳ ಬೆಳವಣಿಗೆ ಹೇಗಿದೆ, ಸಾಲ ಪಡೆದ ಅರ್ಹರು ಯಾವ ಉದ್ಯೋಗ ಕೈಗೊಂಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಬೇಕು ಎಂದರು.

ಆಡಿಟ್ ಪ್ರಬಂಧಕ ಯಮನೂರಪ್ಪ ಮಾತನಾಡಿ, ಸಾಲ ಪಡೆದ ೧೦ ಜನ ಸಾಲಗಾರರ ಕುರಿತು ಸಿಸಿ ಖಾತೆಯ ನಿರ್ವಹಣೆ, ಉಳಿತಾಯದ ಜಮೀನು, ಮತ್ತು ಲಾಭದ ಕುರಿತು ಸ್ವಸಹಾಯ ಸಂಘಗಳು ಮರುಪಾವತಿ ಮಾಡುವ ವಿಧಾನ ಬಗ್ಗೆ ಮಾಹಿತಿ ನೀಡಿದರು. ಮೇಲ್ವೀಚಾರಕ ಲೀನಾ ಫರ್ನಾಂಡಿಸ್, ತಾಲೂಕು ಕೃಷಿ ಮೇಲ್ವೀಚಾರಕ ದೇವೇಂದ್ರ, ರೇಣುಕ ಹಾದಿಮನಿ, ವಿಎಲ್‌ಇ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net