ಸಮನ್ವಯತೆಯ ಬಾಳು ಕಲಿಸುತ್ತೆ ಸ್ಕೌಟ್ಸ್ ಆ್ಯಂಡ ಗೈಡ್ಸ್

Untitled design
ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಜ್ಯೋತಿಬಾ ಪುಲೆ ಸ್ಕೌಟ್ಸ್ ಆ್ಯಂಡ ಗೈಡ್ಸ್ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಗವಿಸಿದ್ದನಗೌಡ ಗೌಡರ, ಶಿಕ್ಷಕರಾದ ಗಿರಿಯಪ್ಪ, ಮಮತಾ, ತೋಟಪ್ಪ, ನಾಗರಾಜ, ರಾಜಪ್ಪ, ಕವಿತಾ ಇತರರು ಇದ್ದರು.
Published on

ಅಳವಂಡಿ: ನಾಲ್ಕು ಗೋಡೆಗಳ ಮದ್ಯ ಓದು ಬರಹ ಕಲಿಯುವ ವಿಧ್ಯಾರ್ಥಿಗಳಿಗೆ ಸಾಮೂಹಿಕ ಕೆಲಸದಲ್ಲಿ ಒಗ್ಗಟ್ಟನ್ನು ಕಾಣಲು ಮತ್ತು ಸಮನ್ವದಿಂದ ಬಾಳುವುದನ್ನು ಸ್ಕೌಟ್ಸ್ ಆ್ಯಂಡ ಗೈಡ್ಸ್ಸ್ ಕಲಿಸುತ್ತೆ ಎಂದು ಮುಖ್ಯ ಶಿಕ್ಷಕ ಗವಿಸಿದ್ದನಗೌಡ ಗೌಡರ ತಿಳಿಸಿದರು.

ಸಮೀಪದ ಕವಲೂರು ಗ್ರಾಮದ ಶ್ರೀೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜ್ಯೋತಿಬಾಪುಲೆ ಸ್ಕೌಟ್ಸ್ ಆ್ಯಂಡ ಗೈಡ್ಸ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೈಹಿಕ ಶಿಕ್ಷಕಿ ಮಮತಾ ಕೊಡಬಾಳ ಮಾತನಾಡಿ, ಕಿರಿಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಶಿಸ್ತು, ಸಂಘಟನೆ, ಸೇವಾ ಮನೋಭಾವ ಬೆಳೆಸುವದು ಸ್ಕೌಟ್ಸ್ ಆ್ಯಂಡ ಗೈಡ್ಸ್‌ನ ಉದ್ದೇಶ.

1907ರಲ್ಲಿ ರಾಬರ್ಟ ಬೇಡನ್ ಪೋವೆಲ್‌ರಿಂದ 20 ಬಾಲಕರೊಂದಿಗೆ ಪ್ರಾರಂಭವಾದ ಚಳುವಳಿ ನಂತರ ಹುಡುಗರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ 1910ರಲ್ಲಿ ಹುಡುಗಿಯರ ಸ್ಕೌಟ ಆರಂಭಿಸಲಾಯಿತು.

ಈ ಚಳುವಳಿಯಲ್ಲಿ ಜಗತ್ತಿನಾದ್ಯಂತ ಅನ್ವಯವಾಗುವ ತತ್ವಗಳಿಂದ ಕೂಡಿರುವದರಿಂದ ಯುವ ಜನತೆ ಹೆಚ್ಚು ಹೆಚ್ಚು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಭ್ಯ ಸಮಾಜದ ನಿರ್ಮಾಣಕ್ಕೆ ಸ್ಕೌಟ್ಸ್ ಆ್ಯಂಡ ಗೈಡ್ಸ್ ಚಳುವಳಿ ಒಂದು ಪರಿಣಾಮಕಾರಿ ಮಾರ್ಗವಾಗಿದೆ ಎಂದರು.

ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ತೋಟಪ್ಪ ಮಟ್ಟಿ, ನಾಗರಾಜ ಶೆಟ್ಟರ, ರಾಜಪ್ಪ, ಕವಿತಾ ನಾಯಕ, ಪ್ರಶಿಕ್ಷಣಾರ್ಥಿಗಳಾದ ಪ್ರವೀಣ, ಗಣೇಶ, ಶೇಖರ್, ದಳನಾಯಕ ಪ್ರಭು ಸಂಕಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net