

ಹುನಗುಂದ: ರೈತರ ಸಂಕಷ್ಟಕ್ಕೆ ಸಹಕಾರಿ ಸಂಘ ಆರ್ಥಿಕವಾಗಿ ನೆರವಾಗುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ತಾಲೂಕಿನ ಹಿರೇಬಾದವಾಡಗಿ ಗ್ರಾಮದಲ್ಲಿ ಗುರುವಾರ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ರೈತರ ಅನುಕೂಲಕ್ಕಾಗಿ ಅನೇಕ ಸೌಲಭ್ಯ ಒದಗಿಸಲಾಗುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸಂಘದ ಪ್ರಗತಿಗೆ ಗ್ರಾಮಸ್ಥರು ಕೈ ಜೋಡಿಸಬೇಕು. ಹಿರೇಬಾದವಾಡಗಿ ಸೇರಿ ಮತಕ್ಷೇತ್ರದ ರಕ್ಕಸಗಿ, ಹಿರೇಮಳಗಾವಿಯಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭಿಸಲಾಗಿದೆ. ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ರಾಜಶೇಖರ ಪರೂತಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮಹಾದೇವ ಕುಂಬಾರ, ಹುನಗುಂದ ಶಾಖೆಯ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಮುಖಂಡರಾದ ಶಿವಾನಂದ ಕಂಠಿ, ಮಹಾಂತೇಶ ಅವಾರಿ, ಸಂಗಣ್ಣ ಗಂಜಿಹಾಳ, ಮಹಾಂತೇಶ ನರಗುಂದ, ಬಸವಂತಪ್ಪ ಅಂಟರತಾನಿ, ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಕಲಗೋಡಿ, ಉಪಾಧ್ಯಕ್ಷೆ ಪದ್ಮಾವತಿ ಸಿಂಗನಗುತ್ತಿ, ಸಿ.ಡಿ. ಕಂದಕೂರ, ಎಸ್.ಆರ್. ಬಾಡಗಿ, ಜಿ.ಎಚ್. ಇಲಕಲ್ ಇತರರಿದ್ದರು.