

ಮಾಂಜರಿ: ನಿಯಮ ಪಾಲಿಸಿದರೆ ಸಹಕಾರಿ ಸಂಸ್ಥೆಗಳು ಆರ್ಥಿಕ ಬೆಳವಣಿಗೆ ಸಾಧಿಸುತ್ತವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿ ಭಾನುವಾರ ಶ್ರೀ ಗಣೇಶ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಸಂಘಟಕ ಶಕ್ತಿಯಿಂದ ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ಅವು ಸಾಮಾಜಿಕ ಕಾಳಜಿ ಸಹ ಮೆರೆಯಬೇಕು ಎಂದರು. ಗ್ರಾಪಂ ಸದಸ್ಯ ಸುರೇಶ ಪಾಟೀಲ ಮಾತನಾಡಿ, ಸಂಘ ಅಭಿವೃದ್ಧಿ ಸಾಧಿಸಲೆಂದು ಹಾರೈಸಿದರು.
ಮುಖ್ಯಅತಿಥಿ ಶ್ರೀಮಂತ ಮಹಾದಜಿ ರಾಜೇ ಸರ್ಕಾರ್, ಸಂಘದ ಅಧ್ಯಕ್ಷ ದಿಲೀಪ್ ಶಿಂಧೆ, ಉಪಾಧ್ಯಕ್ಷ ಸಂಜಯ ಚೌಧರಿ, ನಿರ್ದೇಶಕರಾದ ಪ್ರಭಾಕರ ಶಿಂಧೆ, ಮಹಾದೇವ ಕಾಟೆ, ಮಂಜುನಾಥ ಢಂಗ್, ಅಜಿತರಾವ ದೇಸಾಯಿ ಅಜಿತರಾವ ದೇಸಾಯಿ, ಸಂದೀಪ್ ಶಿಂಧೆ, ಶಿವಾನಂದ ಹತ್ತರಗಿ, ಶಿವಾಜಿ ಕೋಟೆವಾಲೆ, ಗಿರೀಶ ಜೋಶಿ, ರಾಜೇಶ ಧರ್ಮಾಯಕ್, ದಿಲೀಪ್ ಪವಾರ, ಅಶ್ವಿನಿ ಪೋತದಾರ, ಪ್ರಶಾಂತ ಯಾದವ, ಅಜಿತ ಪಾಟೀಲ ಇತರರಿದ್ದರು.