

ಚನ್ನಪಟ್ಟಣ: ಮೈಕ್ರೋ ಪೈನಾನ್ಸ್ನಿಂದ ಸಾಲ ಪಡೆದು ಕಿರುಕುಳ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಬಿಡಿಸಿಸಿ ಬ್ಯಾಂಕ್ನಿಂದ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ಬಿಡಿಸಿಸಿ ಬ್ಯಾಂಕ್ನಿಂದ ಸಂದ ಆವರಣದಲ್ಲಿ ಶನಿವಾರ ರೈತರು ಹಾಗೂ ಮಹಿಳೆಯರಿಗೆ ಕೆಸಿಸಿ ಬೆಳೆ ಸಾಲ ಮತ್ತು ಸ್ವಸಹಾಯ ಸಂಗಳಿಗೆ 18 ಕೋಟಿ ರೂ. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆಯ ಚೆಕ್ ನೀಡಿ ಮಾತನಾಡಿದ ಅವರು, ರೈತರಿಗೆ ಸಹಕಾರ ಸಂಗಳು ಸೇರಿ ಬಿಡಿಸಿಸಿ ಬ್ಯಾಂಕ್ ವರವಾಗಿ, ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿರುವುದು ಉತ್ತಮ ಬೆಳವಣಿಗೆ ಎಂದು ಸಿಪಿವೈ, ಸಹಕಾರಿ ಇಲಾಖೆಯ ಸಹಕಾರದಲ್ಲಿ ಬಿಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಪಂಗೆ ಒಂದು ಪಿಎಸಿಎಸ್ ಸಂ ತೆರೆಯಲು ಕ್ರಮವಹಿಸಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯ ವಿಜಯದೇವ್ ಮಾತನಾಡಿ, ಸವಾಲುಗಳ ನಡುವೆಯೂ ರೈತರ ಅನುಕೂಲಕ್ಕಾಗಿ ಬ್ಯಾಂಕ್ ಕರ್ತವ್ಯ ನಿರ್ವಹಿಸುತ್ತಿದೆ. ಬ್ಯಾಂಕ್ ವ್ಯಾಪ್ತಿಯಲ್ಲಿ ಚನ್ನಪಟ್ಟಣ ಶಾಖೆ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಅತಿ ಹೆಚ್ಚು ಎನ್ಪಿ ಸಹ ಇದೆ. ಜಿಲ್ಲೆಯಲ್ಲಿ 5 ಲ ಲೀ. ಹಾಲು ಉತ್ಪಾದನೆ ಹೆಚ್ಚಿಸುವ ಗುರಿ ಇದ್ದು, ಈ ನಿಟ್ಟಿನಲ್ಲಿ ಹಸು ಸಾಕಣೆಗೆ 1.80 ಲ ರೂ. ಸಾಲ ಸೌಲಭ್ಯ ನೀಡಲು ಬ್ಯಾಂಕ್ ಮುಂದಾಗಿದೆ. ಇದರ ಜತೆಗೆ ಮೊಬೈಲ್ ಬ್ಯಾಂಕಿಂಗ್ ಸೇವೆಗೂ ಶ್ರೀದಲ್ಲಿ ಚಾಲನೆ ನೀಡಲಾಗುವುದು ಎಂದರು.
ಬ್ಯಾಂಕ್ ಮಾಜಿ ಅಧ್ಯ, ಎಂಎಲ್ಸಿಎಸ್ ರವಿ ಮಾತನಾಡಿ, ರೈತರಿಗೆ ಬಿಡಿಸಿಸಿ ಬ್ಯಾಂಕ್ನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಬಡ್ಡಿಯನ್ನು ಸರ್ಕಾರ ಭರಿಸುತ್ತಿದೆ. ರೈತರು ಪಡೆದ ಸಾಲವನ್ನು ಸದುದ್ದೇಶಕ್ಕೆ ಬಳಸಬೇಕು. ಮುಖ್ಯವಾಗಿ ಬ್ಯಾಂಕ್ನಿಂದ ಎರಡು ಹಸು ಸಾಕಣೆಗೆ ಬರೀ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲು ಕ್ರಮವಹಿಸಿದ್ದು, ಈ ಮೊದಲಿಗಿಂತಲೂ ಸಾಲದ ಹಣವನ್ನು ಹೆಚ್ಚಿಸಲಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ ಮಾತನಾಡಿ, ತಾಲೂಕಿನ ಪಲಾನುಭವಿಗಳಿಗೆ 18 ಕೋಟಿ ರೂ. ಸಾಲ ವಿತರಿಸಲಾಗಿದ್ದು, ನನ್ನ ಅವಧಿಯಲ್ಲೇ 47 ಕೋಟಿ ರೂ.ಕ್ಕಿಂತ ಹೆಚ್ಚು ವಿವಿಧ ಸಾಲಗಳು ವಿತರಣೆಯಾಗಿವೆ. ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯ ಎಸ್.ಗಂಗಾಧರ, ನಗರಸಭೆ ಅಧ್ಯ ವಾಸಿಲ್ ಆಲಿಖಾನ್, ಹಾಪ್ಕಾಮ್ಸ್ ಅಧ್ಯ ಕೋಡಂಬಳ್ಳಿ ಶಿವಮಾದು, ನಗರ ಯೋಜನಾ ಪ್ರಾಧಿಕಾರದ ಅಧ್ಯ ಎಸ್.ಆರ್.ಪ್ರಮೋದ್, ಮುಖಂಡರಾದ ದುಂತೂರು ವಿಶ್ವನಾಥ, ಡಿ.ಕೆ.ಕಾಂತರಾಜು, ಬೋರ್ವೆಲ್ ರಂಗನಾಥ ಇದ್ದರು.
ಬಮುಲ್ನಿಂದ ಪರಿಹಾರ
ಬಮುಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ತಾಲೂಕಿನ ಹಾಲು ಉತ್ಪಾದಕ ಸದಸ್ಯರ ಮರಣದ 30 ಲ ರೂ. ವಿಮಾ ಹಣದ ಚೆಕ್ಅನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.