ಚಪ್ಪರದಹಳ್ಳಿ ಸೊಸೈಟಿಗೆ 21 ಲಕ್ಷ ರೂ. ಲಾಭ

11BTP01
ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟನೆ ಮಾಡಿದರು.
Published on

ಬೆಟ್ಟದಪುರ: ಸಹಕಾರ ಸಂಘಗಳ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಪ್ರಮುಖವಾಗಿದೆ ಎಂದು ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಹುಚ್ಚಪ್ಪ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ವರದಿ ಮಂಡಿಸಿ ಬಳಿಕ ಮಾತನಾಡಿದ ಅವರು, ಸಂಘದಲ್ಲಿ ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ನಮ್ಮ ಸಂಘವು 2024-25ನೇ ಸಾಲಿನಲ್ಲಿ 21.03 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸಂಘ ಉತ್ತಮವಾಗಿ ಪ್ರಗತಿ ಕಾಣುತ್ತಿದೆ. ಸಂಘದಲ್ಲಿ ವಿವಿಧ ರೀತಿಯ ಸಾಲ ನೀಡಲಾಗುತ್ತಿದ್ದು, ಸರಿಯಾಗಿ ವಸೂಲಾತಿಯೂ ಆಗುತ್ತಿದೆ. ಇನ್ನೂ ಹೆಚ್ಚು ಜನರಿಗೆ ಸೌಲಭ್ಯ ದೊರೆಯುತ್ತಿವೆ. ಸದಸ್ಯರಿಗೆ ಯಶಸ್ವಿನಿ ಆರೋಗ್ಯ ಯೋಜನೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಘದ ಅಭಿವೃದ್ಧಿ ಸದಸ್ಯರಿಂದ ಮಾತ್ರ ಸಾಧ್ಯ ಎಂದರು.

ಸಭೆಯಲ್ಲಿ ಸದಸ್ಯರು, ರೈತರು ಹಲವು ಮಾಹಿತಿಗಳನ್ನು ಕುರಿತು ಚರ್ಚೆ ನಡೆಸಿದರು. ಸಂಘದ ಆಡಳಿತಾಧಿಕಾರಿ ಸೈಯದಾ ಉಜ್ಮಾ ಶಮನಾ, ಸಹಕಾರ ಇಲಾಖೆಯ ಹಿತೇಂದ್ರ, ಮುಖಂಡರಾದ ಸಿ.ಎನ್.ಬಸವರಾಜು, ನಾಗರಾಜೇಗೌಡ, ನಿಂಗರಾಜು, ರಾಮೇಗೌಡ, ಮುತ್ತುರಾಜೇಗೌಡ, ನಂಜುಂಡೇಗೌಡ, ಪುಟ್ಟಸ್ವಾಮಿಗೌಡ, ಕುಮಾರ, ಸಿ.ಆರ್.ಆಂಜನಿಗೌಡ, ಸಿಬ್ಬಂದಿ ಸಿ.ಕೆ ಮಂಜುನಾಥ್, ಎಂ.ಆರ್.ಯೊಗಾನಂದ, ಎಚ್.ಡಿ.ಅವಿನಾಶ್, ಎಸ್.ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net