ಸಹಕಾರ ಸಂಘಗಳು ರೈತರಿಗೆ ಆಧಾರ ಸ್ತಂಭ

MDG1 (5)
Published on

ಮೂಡಿಗೆರೆ: ರೈತರ ಏಳಿಗೆಗಾಗಿ ದುಡಿಯುತ್ತಿರುವ ಸಹಕಾರ ಸಂಸ್ಥೆಗಳಿಂದಾಗಿ ಕೃಷಿ

ಚಟುವಟಿಕೆಗಳಿಗೆ ಸಂಪನ್ಮೂಲ ಕೊರತೆಯಾಗುತ್ತಿಲ್ಲ. ಗ್ರಾಮೀಣ ಆರ್ಥಿಕತೆಗೆ

ಸಹಕಾರ ಸಂಘಗಳು ರೈತರಿಗೆ ಆಧಾರ ಸ್ತಂಭವಾಗಿದೆ ಎಂದು ಸಂಸದ ಕೋಟ

ಶ್ರೀನಿವಾಸ್ ಪೂಜಾರಿ ಹೇಳಿದರು.

ಮಾಕೋನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿ ಪತ್ತಿನ ಸಹಕಾರ

ಸಂಘದ ಆಡಳಿತ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ 30 ಕೋಟಿ

ಜನರು ಸಹಕಾರ ಸಂಘದ ವ್ಯಾಪ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು 5

ವರ್ಷದಲ್ಲಿ ಈ ಸಂಖ್ಯೆಯನ್ನು ದ್ವಿಗುಣಗೊಳಿಸಿ 60 ಕೋಟಿ ಜನ ಸಹಕಾರ ಸಂಘದ

ಚಟುವಟಿಕೆ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದಲ್ಲಿ ಸಹಕಾರ

ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಲಾಗಿದೆ ಎಂದು

ತಿಳಿಸಿದರು.

ಕಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಂಶುಮಂತ್, ಮಾಜಿ ಸಚಿವರಾದ

ಮೋಟಮ್ಮ, ಬಿ.ಬಿ.ನಿಂಗಯ್ಯ, ಕೆಜಿಎಫ್ ಅಧ್ಯಕ್ಷ ಎಚ್.ಬಿ.ಶಿವಣ್ಣ, ಅಪೆಕ್ಸ್ ಬ್ಯಾಂಕ್

ನಿರ್ದೇಶಕ ಲೋಕಪ್ಪಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ವಿ.ಕೆ.ಶಿವೇಗೌಡ,

ಮಾಕೋನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನ, ನಂದಿಪುರ ಗ್ರಾಪಂ ಅಧ್ಯಕ್ಷ ರಮೇಶ್,

ಸಿಡಿಒ ಜ್ಯೋತಿಲಕ್ಷ್ಮಿ, ಸಂಘದ ಉಪಾಧ್ಯಕ್ಷ ಪಿ.ಎಸ್.ಮೂರ್ತಿ, ನಿರ್ದೇಶಕರಾದ

ಜಿ.ಯು.ಚಂದ್ರೇಗೌಡ, ಎಂ.ಎಲ್.ಕಲ್ಲೇಶ್, ಎನ್.ವಿ.ಸಂದೀಪ್, ಬಿ.ಟಿ.ಮಂಜುಳ,

ಸವಿತಾ ರಮೇಶ್, ಪಲ್ಲವಿ, ಮಂಜುನಾಥ್, ಎಂ.ಎನ್.ಮನು, ಶೃತಿ, ದೇವಿಪ್ರಸಾದ್,

ಎನ್.ಎಸ್.ರವಿಕಿರಣ್, ಜಿ.ವಿ.ಅಣ್ಣಪ್ಪ, ನಿತಿನ್ ಪಟೇಲ್ ಸಿಇಒ ಕೆ.ಜಿ.ಅಜಿತ್

ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net