ಸಹಕಾರಿ ಅಭಿವೃದ್ಧಿಗೆ ಪ್ರಯತ್ನ

17MDL3-Web
ಮೂಡಲಗಿಯ ಬಣಜಿಗ ಸಮಾಜ ಸಂಘದಿಂದ ಡಿಸಿಸಿ ಬ್ಯಾಂಕ್‌ಗೆ ಸತತ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಜಿ.ಢವಳೇಶ್ವರ ಅವರನ್ನು ಸನ್ಮಾನಿಸಲಾಯಿತು.
Published on

ಮೂಡಲಗಿ: ಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ ಹಾಗೂ ಮೂಡಲಗಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಭಾಷ ಢವಳೇಶ್ವರ ಅವರನ್ನು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಢವಳೇಶ್ವರ ಅವರು, ಮೂಡಲಗಿಯ ಗುರು ಹಿರಿಯರ ಕೃಪೆಯಿಂದ ಡಿಸಿಸಿ ಬ್ಯಾಂಕ್‌ಗೆ ಮತ್ತೊಮ್ಮೆ ಆಯ್ಕೆಯಾಗಿರುವೆ. ಎಲ್ಲರನ್ನು ಗಮನಕ್ಕೆ ತೆಗೆದುಕೊಂಡು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ಬಣಜಿಗ ಸಂಘದ ಅಧ್ಯಕ್ಷ ಚನಬಸಪ್ಪ ಅಂಗಡಿ ಮಾತನಾಡಿದರು. ಉಪಾಧ್ಯಕ್ಷ ಶಿವಬಸು ನೀಲಣ್ಣವರ, ಬಿ.ಜಿ.ಜಕಾತಿ, ಸಂಗಪ್ಪ ಅಂಗಡಿ, ಪುರಸಭೆ ಮಾಜಿ ಸದಸ್ಯ ಸಿದ್ದು ಕೋಟಗಿ, ಶಿವಯೋಗಿ ಸಬರದ, ರಾಜಶೇಖರ ಅಂಗಡಿ, ಎಲ್.ಸಿ.ಗಾಡವಿ, ಈರಣ್ಣ ಜಕಾತಿ, ಮಹಾಂತೇಶ ಅಂಗಡಿ, ಅಜ್ಜಪ್ಪ ಅಂಗಡಿ, ಮಹಾಂತೇಶ ಶೆಟ್ಟಿ, ಮೂಡಲಗಿ ಸಹಕಾರಿ ಬ್ಯಾಂಕ್ ನಿರ್ದೇಶಕ ರುದ್ರಪ್ಪ ವಾಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net