

ಅಥಣಿ: ಪಟ್ಟಣದ ಬುಧವಾರ ಪೇಠದಲ್ಲಿರುವ ಕೋ. ಆಪ್. ಸೊಸೈಟಿಯೊಂದರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಸುನೀಲ ಬ. ಪಟ್ಟಣಶೆಟ್ಟಿ (47) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ.
ಇವರ ಸಾವಿನ ಸುತ್ತ ಹಲವಾರು ಅನುಮಾನ, ಸಂಶಯಗಳು ಹುಟ್ಟಿಕೊಂಡಿವೆ. ಸೊಸೈಟಿಯಲ್ಲಿ ಇಟ್ಟಿರುವ ಠೇವಣಿದಾರರಿಗೆ ಮರಳಿ ನೀಡಲು ಹಣದ ಕೊರತೆ ಅಥವಾ ಆಡಳಿತ ಮಂಡಳಿಯಲ್ಲಿ ಸಮಸ್ಯೆ ಇತ್ತೋ, ಬೇರೆ ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬಯಲಿಗೆ ಬರಬೇಕಿದೆ.
ಸುನೀಲ ಅವರಿಗೆ ಪತ್ನಿ, ಪುತ್ರ, ತಂದೆ ತಾಯಿ ಹಾಗೂ ಸಹೋದರರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಿಪಿಐ ಶಂಕರಗೌಡ ಬಸನಗೌಡರ ತಿಳಿಸಿದ್ದಾರೆ.