ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು- ಎಚ್.ಜಿ. ಹಿರೇಗೌಡ್ರ

IMG-20230904-WA0054
Published on

ಗದಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಆಶ್ರಯದಲ್ಲಿ ಗದಗ ಹಾಗೂ ನರಗುಂದ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ೦೪-೦೯-೨೦೨೩ ರಂದು ಬೆಳಿಗ್ಗೆ ೧೧ ಘಂಟೆಗೆ ರೋಟರಿ ಕಮ್ಯುನಿಟಿ ಕೇರ್ ಸೆಂಟರ್ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಚ್. ಜಿ. ಹಿರೇಗೌಡ್ರ ರವರು ಮಾತನಾಡುತ್ತಾ ಇತ್ತೀಚೆಗೆ ಹಾಲು ಉತ್ಪಾದನೆ ಕಡಿಮೆಯಾಗಿದ್ದು ಸದಸ್ಯರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಡುವುದು ಹಾಗೂ ಒಕ್ಕೂಟದಿಂದ ಒದಗಿಸುತ್ತಿರುವ ಪಶು ಆಹಾರವನ್ನು ಹೆಚ್ಚು ಹೆಚ್ಚು ಬಳಸುವುದು ಸೂಕ್ತ ಎಂದು ಹೇಳಿದರು ಇದರಿಂದ ಸಂಘದ ಪ್ರಗತಿ ಹಾಗೂ ಒಕ್ಕೂಟದ ಪ್ರಗತಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದ್ದು ಇದಕ್ಕೆ ಸದಸ್ಯರುಗಳು ಸಹಕರಿಸಬೇಕೆಂದು ಕರೆಯಿತ್ತರು. ಈ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ವಿದ್ಯಾ ಎ. ಹೊನ್ನಶೆಟ್ಟಿ ಇವರು ಮಾತನಾಡುತ್ತಾ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆ ಸಂಘದ ಲೆಕ್ಕಪರಿಶೋಧನಾ ವರದಿಯೇ ಆಧಾರವಾಗಿರುತ್ತದೆ ಕಾರಣ ಸಹಕಾರಿ ಕಾಯ್ದೆಯ ಅನ್ವಯ ನಿಗದಿತ ಅವಧಿಯ ಒಳಗೆ ಲೆಕ್ಕ ಪರಿಶೋಧನೆಯನ್ನು ಮಾಡಿಸುವುದು ಪ್ರಮುಖವಾಗಿದ್ದು ಈ ಕುರಿತು ಎಲ್ಲರೂ ಆಸಕ್ತಿ ವಹಿಸಿ ಆರ್ಥಿಕ ತಖ್ತೆಗಳನ್ನು ಸಿದ್ದಪಡಿಸಿ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕೆಂದು ಹೇಳಿದರು.

ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಸಿ. ಎಂ. ಪಾಟೀಲ ರವರು ಮಾತನಾಡುತ್ತಾ ಮಹಾಮಂಡಳವು ಸಹಕಾರ ಶಿಕ್ಷಣ ತರಬೇತಿ ಪ್ರಚಾರ ಇದರ ಮೂಲಕ ಎಲ್ಲಾ ಕ್ಷೇತ್ರದ ಎಲ್ಲಾ ವರ್ಗದವರಿಗೆ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಸಹಕಾರ ಸಂಘಗಳು ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ ಕಾರಣ ತರಬೇತಿಯಲ್ಲಿ ಅಳವಡಿಸಿರುವ ವಿಷಯಗಳನ್ನು ತಿಳಿದುಕೊಂಡು ಸಂಘಗಳಲ್ಲಿ ಅಳವಡಿಸಿ ಪ್ರಗತಿಯತ್ತ ಸಾಗಲು ವಿನಂತಿಸಿದರು.

ಕಾರ್ಯಕ್ರಮದ ಮೊದಲಿಗೆ ಕದಡಿ ಹಾಗೂ ಹೊಸೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಸುಮಂಗಲಾ ದುಗಾನಿ ಮತ್ತು ಶ್ರೀಮತಿ ಕಲಾವತಿ ಹೂಗಾರ ಇವರು ಪ್ರಾರ್ಥನೆ ಮಾಡಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ, ನಿರೂಪಿಸಿದರು ನಂತರ ಯೂನಿಯನ್‌ದ ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ರಶೀದಾಬಾನು ಸಿ. ಯಲಿಗಾರ ಇವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net