

ಕುಶಾಲನಗರ: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ೭೧ನೇ ಅಖಿಲ ಭಾರತಸಹಕಾರ ಸಪ್ತಾಹದ ಆಚರಣೆಯನ್ನು ಸಹಕಾರ ಸಪ್ತಾಹದ ಧ್ವಜವನ್ನು ಹಾರಿಸುವ ಮೂಲಕ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಿವಿಧ ಸಹಕಾರ ಸಂಘಗಳ ಬೆಳವಣಿಗೆಯ ಮೂಲಕ ರಾಜ್ಯದ ಸಹಕಾರ ಸಂಘಗಳ ಪ್ರಗತಿಗಳ ಅನ್ವಯ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ತಮ್ಮ ಪ್ರಗತಿಯ ಹಂತದ ಮುಖೇನ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಹಕಾರ ಸಂಘಗಳು ಪ್ರಗತಿಗೆ ಸಹಕಾರ ಸಂಘಗಳ ವ್ಯಾಪ್ತಿಯ ರೈತರ ಸಹಕಾರವು ಬಹುಮುಖ್ಯವಾಗಿರುತ್ತದೆ. ಸಹಕಾರ ತತ್ವಗಳ, ಸಂಘದ ಬೆಳವಣಿಗೆ ನಿಯಮಾನುಸಾರ, ವಿವಿಧ ಯೋಜನೆಯ ಅನುಸಾರ ಆಯಾ ವ್ಯಾಪ್ತಿಯ ಸಹಕಾರ ಸಂಘಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ವಿ.ಬಸಪ್ಪ, ನಿರ್ದೇಶಕರಾದ ಕೆ.ಪಿ.ರಾಜು, ಕೆ.ಬಿ.ರಾಮಚಂದ್ರ, ಜಯಶ್ರೀ, ಎಸ್.ಎಸ್.ಕೃಷ್ಣ, ಕುಮಾರ್, ಕುಶಾಲನಗರ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟ, ಸಂಘದ ಮುಖ್ಯ ಕಾರ್ಯನಿವಾಹರ್ಣಾಧಿಕಾರಿ ಎಂ.ಪಿ.ಮೀನಾ, ಸಂಘದ ಸಿಬ್ಬಂದಿಗಳು ಸೇರಿದಂತೆ ಸಂಘದ ವ್ಯಾಪ್ತಿಯ ಹಲವು ರೈತರು ಹಾಜರಿದ್ದರು.