ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ

ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ಸಹಿಪ್ರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ರಜನಿ, ಪಿಡಿಒ ಗಂಗಾಧರ, ಬಿಇಒ ಕಚೇರಿಯ ಸ್ಥಾನಿಕಾಧಿಕಾರಿ ಶಿವರಾಮ್ ಇತರರಿದ್ದರು.

Published on

ಹೊಸಪೇಟೆ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.

ತಾಲೂಕಿನ ಕಡ್ಡಿರಾಂಪುರದ ಸಹಿಪ್ರ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ನಾಣ್ಣುಡಿಯಂತೆ ಮಕ್ಕಳ ಪ್ರತಿಭೆ ಕೇವಲ ಶಿಕ್ಷಣಕ್ಕಾಗಿ ಸೀಮಿತವಾಗಿರದೆ ವಿಶೇಷ ಪ್ರತಿಭೆ ಅನಾವರಣಕ್ಕೆ ಶಾಲೆಗಳು ಸಹಕಾರಿಯಾಗಿವೆ. ವಾರ್ಷಿಕೋತ್ಸವ ಹಾಗೂ ಇತರ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜಿಸಬೇಕು ಎಂದರು. ಗ್ರಾಪಂ ಅಧ್ಯಕ್ಷೆ ರಜನಿ, ಪಿಡಿಒ ಗಂಗಾಧರ, ಬಿಇಒ ಕಚೇರಿಯ ಸ್ಥಾನಿಕಾಧಿಕಾರಿ ಶಿವರಾಮ್, ಪ್ರಮುಖರಾದ ಗೋಪಾಲ, ಹುಲಿಯಪ್ಪ, ನಲ್ಲಾಸ್ವಾಮಿ, ಶಿವು, ಪ್ರಶಾಂತ್, ಅಜ್ಜಪ್ಪ ಸ್ವಾಮಿ, ರಘು ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net