

ಗಜೇಂದ್ರಗಡ: ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಮಹಿಳೆಯರ ಜೀವನ ಹಸನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಯೋಜನೆಯ ಸದ್ಬಳಕೆಯಲ್ಲಿ ಎಲ್ಲರ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯವಾಗಿದೆ ಎಂದು ಎಡಿಪಿಸಿ ಕಿರಣಕುಮಾರ ಎಸ್.ಎಚ್. ಹೇಳಿದರು.
ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಕುರಿತು ಜರುಗಿದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ವಿುಕರ ಸಂಖ್ಯೆ ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನರೇಗಾ ಯೋಜನೆಯ ತಾಪಂ ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕ ಉಮೇಶ ಜಕ್ಕಲಿ, ಬಿಎಫ್ಟಿ ಜ್ಯೋತಿ ವಡ್ಡರ, ಎಚ್.ಎಸ್. ಪವಾಡಿಗೌಡ್ರ ಮಾತನಾಡಿದರು.
ನಮೂನೆ 6 ಸಂಗ್ರಹ:
ಮಹಿಳೆಯರಲ್ಲಿ ಕೆಲಸಕ್ಕೆ ಬರುವ ಭರವಸೆ ಮೂಡಿಸಿ, ಸ್ಥಳದಲ್ಲಿಯೇ ನಮೂನೆ 6 ಅನ್ನು ತುಂಬಿ, ಎಡಿಪಿಸಿ ಮೂಲಕ ಗ್ರಾಮ ಪಂಚಾಯಿತಿಗೆ ನೀಡಲಾಯಿತು. ಈ ವೇಳೆ ನಮೂನೆ 6 ಸ್ವೀಕರಿಸಿದ ಎಡಿಪಿಸಿ ಅವರು 15 ದಿನದೊಳಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದರು. ಡಿಇಒ ಪ್ರಕಾಶ ನರೇಗಲ್ ಕಾರ್ಯಕ್ರಮ ನೆರವೇರಿಸಿದರು. ಗ್ರಾಮ ಕಾಯಕ ಮಿತ್ರ ಶಿವಗಂಗಾ ಹುಲ್ಲಣ್ಣವರ, ಪಂಚಾಯಿತಿ ಸಿಬ್ಬಂದಿ ಶಾಂತಾ ಬಾಗೂರು, ಮರಿಯಪ್ಪ ಮಾದರ, ಇತರರಿದ್ದರು.