ಮರಾಠ ಸಮಾಜದ ಅಭಿವೃದ್ಧಿಗೆ ಸಹಕಾರ ಅಗತ್ಯ

h26-maratha
Published on

ಹುಬ್ಬಳ್ಳಿ: ಮರಾಠ ಸಮಾಜದ ಆಶ್ರಯದಲ್ಲಿ ಹಳೇ ಹುಬ್ಬಳ್ಳಿ ಆನಂದ ನಗರದ ಮುಖ್ಯ ರಸ್ತೆಯ ಶ್ರೀ ಬಾಲಮಾರುತಿ ಮಂದಿರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಬಾಲಮಾರುತಿ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಶನಿದೇವರು, ಶ್ರೀ ನಾಗದೇವತೆ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಹೋಮ-ಹವನ, ಪೂಜಾ ಕೈಂಕರ್ಯಗಳು ಇತ್ತೀಚೆಗೆ ಅದ್ದೂರಿಯಾಗಿ ನಡೆದವು.
ಸಮಾಜದ ಅಧ್ಯಕ್ಷ ಮಹೇಶ ದಾಬಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಗಟ್ಟಿಯಾಗಿ ಬೆಳೆಯಲು ದೇವಸ್ಥಾನ ಇರಬೇಕು. ಸರ್ವತೋಮುಖ ಅಭಿವೃದ್ಧಿಗೆ ಸಹಕಾರವೂ ಅಗತ್ಯ. ನಮ್ಮ ಸಮಾಜದ ಹಕ್ಕು ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದರು. ನಂತರ ಅನ್ನಸಂತರ್ಪಣೆ ನಡೆಯಿತು.
ಮರಾಠ ಸಮಾಜದ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ, ಮುಖಂಡರಾದ ಮನೋಹರ ಕದಂ, ಗುರುರಾಜ ಕಾಟೇನವರ, ಮಂಜುನಾಥ ಡಂಬಳ, ಮಹೇಶ ಘಾಟಗೆ, ಅರವಿಂದ ಮೆಹರವಾಡೆ, ಕಾಶಿನಾಥ ಚವ್ಹಾಣ, ಅರುಣ ಗೌಳಿ, ಕೃಷ್ಣ ಜಾಧವ, ಮಂಜುನಾಥ ಚಾಂದಗುಡೆ, ದೀಪಕ್ ಜಾಧವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net