ಸಂಘದ ಅಭಿವೃದ್ಧಿಗೆ ಸಹಕಾರ ಮುಖ್ಯ

Cooperation is important for the development of the association.
ರಬಕವಿ ಶಿವದಾಶಿಮಯ್ಯ ಸಮುದಾಯ ಭವನದಲ್ಲಿ ಸರ್ಕಾರಿ ನೌಕರರ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಮರೆಗುದ್ದಿ ಅಡವಿಸಿದ್ಧೇಶ್ವರ ಮಠದ ಡಾ. ನಿರೂಪಾಧೀಶ್ವರ ಶ್ರೀಗಳು, ಬಿ.ಡಿ. ನೇಮಗೌಡ, ಮೀನಕ್ಷಿ ಸವದಿ, ನಗರಸಭೆ ಅಧ್ಯಕ್ಷೆ ವಿದ್ಯಾ ದಬಾಡಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಸರ್ಕಾರಿ ನೌಕರರ ಆರ್ಥಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಹಕಾರ ಸಂಘವು ಸರಳವಾಗಿ ಸಾಲ ಸೌಲಭ್ಯ ಒದಗಿಸಬೇಕು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರು ತಾವು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಸಂಘಗಳು ಅಭಿವೃದ್ಧಿಯಾಗುತ್ತವೆ. ಸಂಘದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಮುಖ್ಯವಾಗಿದೆ ಎಂದರು.

ಜಮಖಂಡಿ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ರಾಮನಗೌಡ ಪಾಟೀಲ ಮಾತನಾಡಿ, ಇಂದಿನ ದಿನಗಳಲ್ಲಿ ಸಂಘ ಸ್ಥಾಪಿಸುವುದು ಕಷ್ಟ ಸಾಧ್ಯ. ನಂತರ ಅವುಗಳನ್ನು ಮುಂದುವರೆಸಿಕೊಂಡು ಹೋಗುವುದು ಜವಾಬ್ದಾರಿಯುತ ಕೆಲಸವಾಗಿದೆ. ಸಂಘದ ಮುಂದಾಳುಗಳ ಮೇಲೆ ಸಾಕಷ್ಟು ಹೊಣೆಗಾರಿಕೆಗಳು ಇರುತ್ತವೆ ಎಂದರು.

ಬಿಇಒ ಅಶೋಕ ಬಸನ್ನವರ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಆರ್ಥಿಕ ಶಿಸ್ತು ಬಹಳಷ್ಟು ಮುಖ್ಯವಾಗಿದೆ. ಹಣವು ವ್ಯಕ್ತಿಗತವಾಗಿ ತನ್ನ ರೂಪಗಳನ್ನು ಬದಲಾಯಿಸುತ್ತದೆ. ಆದ್ದರಿಂದ ನಮ್ಮ ಜೀವನದ ಯಶಸ್ವಿಗೆ ಹಣದ ಸದ್ಬಳಕೆ ಅಗತ್ಯವಾಗಿದೆ ಎಂದರು.

ನೌಕರ ಸಂಘದ ಹಿರಿಯರಾದ ಬಿ.ಬಿ.ಮುಧೋಳ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಸವದಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಬಿ.ಡಿ.ನೇಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರೆಗುದ್ದಿ ಅಡವಿಸಿದ್ಧೇಶ್ವರ ಮಠದ ಡಾ. ನಿರೂಪಾಧೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ ವಿದ್ಯಾ ದಬಾಡಿ, ವೆಂಕನಗೌಡ ಪಾಟೀಲ, ಎಸ್.ಎಸ್. ಬಿರಾದಾರ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ಹನಗಂಡಿ, ಸಂಜೀವ ಜೋತಾವರ, ಗೋಪಾಲ ಕಾಬರಾ, ಬಸವರಾಜ ಬಾಗೇನವರ, ಬಸವರಾಜ ಹೊಸೂರ, ಎಂ.ಎಚ್. ಲಾಡಖಾನ್, ಪ್ರಕಾಶ ಹೊಸಮನಿ, ಶ್ರೀಕಾಂತ ಮಾಯನ್ನವರ ಉಪಸ್ಥಿತರಿದ್ದರು.

ಪ್ರಕಾಶ ಮಠಪತಿ, ಮಾರುತಿ ನಾಯಕ, ಭಾರತಿ ಗಂಗಾವತಿ, ರಾಜೇಶ್ವರಿ ಬಾಣಕಾರ, ಸಂತೋಷಿಮಾ ರಾಮದುರ್ಗ, ಸುಜಾತಾ ಗೌಡರ, ಶೈಲಾ ಮಿರ್ಜೆ, ಬಿ.ಬಿ.ತೇಲಿ, ಭಾರತಿ ಗೋವಿಂದಗೋಳ, ಪ್ರಕಾಶ ಪೂಜಾರಿ, ಎಸ್.ಎಸ್. ಮಗದುಮ್, ಅಣ್ಣಪ್ಪ ಸಲಬನ್ನವರ, ಆರ್. ಎಸ್. ಝಳಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net