ಕರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಕಾರ ಮುಖ್ಯ

18-12-rama-covid meeting
Published on

ರಾಮನಗರ: ಕರೊನಾ ಲಸಿಕೆ ಹಾಕುವ ಪ್ರಕ್ರಿಯೆಗೆ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರ ಸಹಕಾರ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಇಲಾಖೆ ವತಿಯಿಂದ ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ನೆಮ್ಮದಿ ಆಶ್ರಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19ರ ಲಸಿಕೆ ಪರಿಚಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಖಾಸಗಿ ವೈದ್ಯರು ಸಹ ಈ ಮಹತ್ತರವಾದ ಕಾರ್ಯದಲ್ಲಿ ಕೈಜೋಡಿಸಬೇಕಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಪದ್ಮಾ ಮಾತನಾಡಿ, ಲಸಿಕೆ ಪರಿಚಯ, ಲಸಿಕಾ ತಂಡಗಳ ರಚನೆ ಮತ್ತು ಜವಾಬ್ದಾರಿ, ಲಸಿಕೆ ನೀಡುವ ಮೊದಲು ಪೂರ್ವ ಸಿದ್ಧತೆ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಿಪಿಟಿ ಮೂಲಕ ಉಪನ್ಯಾಸ ನೀಡಿದರು.

ಐಎಂಎ. ಜಿಲ್ಲಾ ಅಧ್ಯಕ್ಷ ಡಾ. ಶ್ರೀಧರ್ ಮಾತನಾಡಿ, ಕರೊನಾ ನಿಯಂತ್ರಣದಲ್ಲಿ ಖಾಸಗಿ ವೈದ್ಯರು ಸಹಕರಿಸಿದ್ದು, ಲಸಿಕೆ ನೀಡುವ ಸಂಧರ್ಭದಲ್ಲಿಯೂ ಎಲ್ಲ ವೈದ್ಯರು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್. ಡಿಎಸ್​ಒ ಡಾ. ಕಿರಣ್ ಶಂಕರ್, ಡಿಟಿಒ ಡಾ. ಕುಮಾರ್, ಡಿಎಂಒ ಡಾ. ಪ್ರಸನ್ನ ಕುಮಾರ್. ಟಿಎಚ್​ಒಗಳಾದ ಡಾ. ಶಶಿಕಲಾ, ಡಾ. ನಂದಿನಿ, ಡಾ. ಸತೀಶ್, ಡಾ. ರಾಜು, ಡಿಎಚ್​ಇಒ ಬಿ.ಎಸ್ ಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net